Advertisement

Mudigere; ಎಸ್ಟೇಟ್ ನಲ್ಲಿ ಹೆಜ್ಜೇನು ದಾಳಿ:10 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

06:26 PM Sep 28, 2023 | Team Udayavani |

ಮೂಡಿಗೆರೆ : ತಾಲೂಕಿನ ಕಲ್ಲಕ್ಕಿ ಎಸ್ಟೇಟ್ ನಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಗುರುವಾರ ನಡೆದಿದೆ.

Advertisement

ತಾಲೂಕಿನ ಬಾಳೂರು ಸಮೀಪದ ಕಲ್ಲಕ್ಕಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಕಾರ್ಮಿಕರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. 10 ಜನರ ಮೇಲೆ ದಾಳಿ ನಡೆಸಿದೆ.ವಿನೋದ, ಪುಷ್ಪ, ಪ್ರೇಮ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಬಣಕಲ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಜ್ಜೇನು ಕಡಿತಕ್ಕೊಳಗಾದ ಉಳಿದವರು ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದ್ದಾರೆ.

ತೋಟಗಳಲ್ಲಿ ಜೇನುಗಳು ಗೂಡು ಕಟ್ಟಿಕೊಂಡಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ಹಾಗೂ ಕೂಲಿ ಕೆಲಸ ಮಾಡುವವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಯುವಕರು, ಯುವತಿಯರು ಸೇರಿದಂತೆ ಗ್ರಾಮದ ಹಲವರು ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆ ಸಾಕಷ್ಟು ನಡೆದಿವೆ. ಜೇನು ಹುಳುಗಳ ಹಠಾತ್ ದಾಳಿಗೆ ಆತಂಕಗೊಂಡಿರುವ ಗ್ರಾಮಸ್ಥರು ದಾಳಿ ನಡೆದ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next