ಮುಧೋಳ: ಪ್ರತಿ ಸಾರಿ ಪ್ರವಾಹ ಬಂದಾಗ ಒಕ್ಕಲೇಳುವಂತಾಗಿದೆ. ನಮಗೊಂದು ಶಾಶ್ವತ ನೆಲೆ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರತಿನಿ ಧಿಗಳ ಮುಂದೆ ಗೋಗರೆದರೂ ಭರವಸೆ ಹೊರತು ಮತ್ತೇನೂ ಸಿಕ್ಕಿಲ್ಲ. ಸರಿ ಸುಮಾರು 2490 ಜನಸಂಖ್ಯೆ ಹಾಗೂ 1058 ಜಾನುವಾರು ಹೊಂದಿರುವ ಮಿರ್ಜಿ ಗ್ರಾಮ ಸ್ಥಳಾಂತರಿಸಬೇಕೆನ್ನುವ ಬೇಡಿಕೆ ಹಲವಾರು ದಶಕದಿಂದ ಇದ್ದರೂ ಜಾಗದ ನೆಪವೊಡ್ಡುವ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ.
Advertisement
ನಿಮ್ಮ ಶಾಶ್ವತ ನೆಲೆ ಕಟ್ಟಿಕೊಡಲು ಸರ್ಕಾರ ತಯಾರಿದ್ದು, ಆದರೆ ಗ್ರಾಮ ಸ್ಥಳಾಂತರಕ್ಕೆ ಜಮೀನು ಸಮಸ್ಯೆ ಉಂಟಾಗಿದೆ. ಯಾರಾದರೂ ಸರ್ಕಾರಿ ಬೆಲೆಯಲ್ಲಿ ಜಮೀನು ನೀಡಿದರೆ ಗ್ರಾಮ ಸ್ಥಳಾಂತರಕ್ಕೆ ನಾವು ಸಿದ್ಧ ಎನ್ನುತ್ತಾರೆ. ಬಂಗಾರ ಬೆಳೆಯುವ ಭೂಮಿಯನ್ನು ಸರ್ಕಾರಿ ಬೆಲೆಗೆ ಕೊಟ್ಟು ನೆರವಾಗಲು ಯಾವ ಜಮೀನ್ದಾರರು ಮುಂದೆ ಬರುತ್ತಿಲ್ಲ. ಇದೊಂದೇ ಕಾರಣದಿಂದಮಾತ್ರ ಮಿರ್ಜಿ ಗ್ರಾಮದ ಶಾಶ್ವತ ಸ್ಥಳಾಂತರ ಮರೀಚಿಕೆಯಾಗಿಯೇ ಉಳಿದುಕೊಂಡಿದೆ.
Related Articles
Advertisement