Advertisement

Mudhol: ಯುವ ಮತದಾರರ ಹೆಸರು ಸೇರ್ಪಡೆಗೆ ಆಸಕ್ತಿ ವಹಿಸಿ

04:42 PM Oct 31, 2023 | Team Udayavani |

ಮುಧೋಳ: ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರ ಗುರುತಿನ ಚೀಟಿ ಕರಡು ಪ್ರತಿ ಹಾಗೂ ಮತಗಟ್ಟೆಗೆ ಸಂಬಂಧಿಸಿದಂತೆ
ಹಲವಾರು ಬದಲಾವಣೆಗಳಾಗಿವೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

Advertisement

ಜಮಖಂಡಿ ಉಪವಿಭಾಗ ವ್ಯಾಪ್ತಿಯ ಜಮಖಂಡಿ, ಮುಧೋಳ, ಬೀಳಗಿ ಹಾಗೂ ರಬಕವಿ-ಬನಹಟ್ಟಿ ತಾಲೂಕುಗಳ ವ್ಯಾಪ್ತಿಯ
ಚುನಾವಣೆ ಅಧಿಕಾರಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ಸಂಕ್ಷಿಪ್ತ ವರದಿ ಪ್ರಕಟಗೊಂಡಿದ್ದು, ವರದಿ ಪ್ರಕಾರ ಅನರ್ಹ ಮತದಾರರನ್ನು ತೆಗೆದುಹಾಕುವುದು, ಮತದಾನ ಪಟ್ಟಿಯಲ್ಲಿನ ಹೆಸರು ತಿದ್ದುಪಡಿ, ಫೋಟೊಗಳು ಸೂಕ್ತ ರೀತಿಯಲ್ಲಿ ಶಬ್ದಗಳ ದೋಷ, ಹಾಗೂ ಹೊಸ ಮತದಾರರ ಸೇರ್ಪಡೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಕರಡು ಮತದಾರರ ಪಟ್ಟಿ ಪ್ರಕಟಗೊಂಡಿರುವ ಹಿನ್ನೆಲೆ ಪಟ್ಟಿಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಅಥವಾ ರಾಜಕೀಯ ಪಕ್ಷಗಳ ಮುಖಂಡರು ಡಿ. 9ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಆಕ್ಷೇಪಣೆ ಪರಿಶೀಲಿಸಿ ಸರಿಪಡಿಸುವ ಕಾರ್ಯವನ್ನು ಅ ಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಿದರು.

ಚುನಾವಣೆ ಆಯೋಗದ ವತಿಯಿಂದ ನವೆಂಬರ್‌ 18, 19 ಹಾಗೂ ಡಿ. 2 ಮತ್ತು 3ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಯುವಮತದಾರರ ಸಂಖ್ಯೆ ವೃದ್ಧಿಸುವುದು ಸೇರಿದಂತೆ ಹಲವಾರು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಬಿಎಲ್‌ಒಗಳೊಂದಿಗೆ ರಾಜಕೀಯ ಪಕ್ಷಗಳ ಮುಖಂಡರು ಬೂತ್‌ ಏಜೆಂಟ್‌ರನ್ನು ನೇಮಕ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಚುನಾವಣೆ ಕಾರ್ಯಕ್ಕೆ ಅನುಕೂಲಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ವಾರದೊಳಗೆ ಬಿಎಲ್‌ಇಗಳ ನೇಮಕ ಮಾಡಿಕೊಡಬೇಕು ಎಂದು ತಿಳಿಸಿದರು.

Advertisement

ಲೋಕಸಭೆ ಚುನಾವಣೆ ಹಿನ್ನೆಲೆ ಕರಡು ಪ್ರತಿ ಪ್ರಕಟಗೊಂಡು, ಅವುಗಳಿಗೆ ಬರುವ ಆಕ್ಷೇಪಣೆ ಪರಿಶೀಲಿಸಿ ತಿದ್ದುಪಡಿಗೊಳಿಸುವುದರ ಮೂಲಕ 2024ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುತ್ತದೆ ಎಂದು ಮಾಹಿತಿ
ಹಂಚಿಕೊಂಡರು. ಜಮಖಂಡಿ ಉಪವಿಭಾಗದ ನಾಲ್ಕೂ ವಿಧಾನಸಭೆ ಮತಕ್ಷೇತ್ರದಲ್ಲಿ ಒಟ್ಟು 944 ಮತಗಟ್ಟೆಗಳಿವೆ. 872236 ಮತದಾರರ ಸಂಖ್ಯೆ ಇದೆ ಎಂದು ಸಭೆಯಲ್ಲಿ ತಿಳಿಸಿದರು. ಬಹುತೇಕ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಸಾರ್ವಜನಿಕರು ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದರ ಬಗ್ಗೆ ಆಯಾ ತಾಲೂಕಿನ ತಹಶೀಲ್ದಾರ್‌ ಕಚೇರಿ ಅಥವಾ
ಸಿಇಒ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು. ಸಭೆಯಲ್ಲಿ ಮುಧೋಳ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಜ್ಯೋತಿಬಾ ನಿಂಬಾಳ್ಕರ್‌, ಎಂ.ವಿ. ಮಠದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next