Advertisement

ಮುದ್ದೇಬಿಹಾಳ : ಗಾಳಿ ಮಳೆಗೆ ಅಪಾರ ಬಾಳೆ ಬೆಳೆ ನಾಶ

04:31 PM Apr 30, 2023 | Team Udayavani |

ಮುದ್ದೇಬಿಹಾಳ : ಶನಿವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ 1 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

Advertisement

ರೇವಣಶಿದಪ್ಪ ಕೆಂಬಾವಿ ಎಂಬುವರಿಗೆ ಸೇರಿದ ಬಾಳೆ ತೋಟದಲ್ಲಿನ 1500 ಗಿಡಗಳ ಪೈಕಿ 700 ಗಿಡಗಳು ನೆಲಸಮ ಆಗಿವೆ. ಇದರಿಂದ ಕೈಗೆ ಬಂದ ಅಂತಹ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿಯಾಗಿದೆ. ಅದಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಮತ್ತೊಂದೆಡೆ ಪಟ್ಟಣದ ಪೆಟ್ರೋಲ್ ಬಂಕ್ ಹಿಂದಿನ ಬಾಳೆ ತೋಟದಲ್ಲಿ ಸಿದ್ದಣ್ಣ ಮನ್ಮಂಥನಾಳ ಇವರ ಹೊಲದಲ್ಲಿ 1 ಎಕರೆ ಬಾಳೆ ಬೆಳೆದಿದ್ದು, ಇದರಲ್ಲಿ 300 ಗಿಡಗಳು ಬಾರಿ ಗಾಳಿ ಮಳೆಗೆ ಬಾಳೆ ಗಿಡಗಳು ನೆಲಕ್ಕೆ ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next