Advertisement

ಕೋವಿಡ್ : ಪಿಡಿಒ ತರಾಟೆಗೆ

03:30 PM Apr 18, 2020 | Naveen |

ಮುದ್ದೇಬಿಹಾಳ: ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ, ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಿರಿ ಎಂದು ಜಮ್ಮಲದಿನ್ನಿ ಇಂಗಳಗೇರಿ ಪಿಡಿಒ ವಿಜಯಕುಮಾರ ಕೋರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಗ್ರಾಮದಲ್ಲಿ ಶುದ್ಧ ಕುಡಿವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಕೋರಿ 2 ವರ್ಷಗಳಿಂದ ಪಿಡಿಒ ಆಗಿ ಕೆಲಸ ಮಾಡುತ್ತಿದ್ದರೂ ಇದುವರೆಗೂ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಕೇಳಿ ಬಗೆಹರಿಸಲು ಮುಂದಾಗಿಲ್ಲ. ಗ್ರಾಮದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡು ಸ್ವಜನ ಪಕ್ಷಪಾತ ಎಸಗುತ್ತಿದ್ದಾರೆ. ಮಹಾಮಾರಿ ಕೋವಿಡ್ ಬಂದು ತಿಂಗಳುಗಳಾಗುತ್ತ ಬಂದರೂ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಗ್ರಾಮಸ್ಥರು ಒತ್ತಾಯಿಸಿದ ಮೇಲೆ ಪಂಚಾಯತ್‌ ಅಧ್ಯಕ್ಷರೊಂದಿಗೆ ಗ್ರಾಮಕ್ಕೆ ಬಂದಿದ್ದಾರೆ ಎಂದು ದೂರಿದರು.

ಕೋವಿಡ್ ನ ಈ ಪರಿಸ್ಥಿತಿಯಲ್ಲಿ ಬಡ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಕೊಡಬೇಕು ಎಂದು ಮೇಲಧಿಕಾರಿಗಳು
ತಿಳಿಸಿದ್ದರೂ ಇದುವರೆಗೂ ಕ್ರಮ ಏಕೆ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈಗಲಾದರೂ ಸುಧಾರಿಸಿಕೊಂಡು ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ, ಮೂಲಸೌಕರ್ಯ ಒದಗಿಸದಿದ್ದರೆ ತಾಪಂ ಇಒ, ಜಿಪಂ ಸಿಇಒ, ತಹಶೀಲ್ದಾರ್‌, ಸ್ಥಳೀಯ ಶಾಸಕರು ಸೇರಿ ಹಲವು ಅಧಿಕಾರಿಗಳ ಬಳಿ ತೆರಳಿ ಪಿಡಿಒ ವರ್ಗಾವಣೆಗೆ ಒತ್ತಾಯಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next