Advertisement

ಪಿಪಿಇ ಕಿಟ್‌-ಮಾಸ್ಕ್ ವಿತರಿಸಿದ ನಡಹಳ್ಳಿ

04:20 PM Apr 18, 2020 | Naveen |

ಮುದ್ದೇಬಿಹಾಳ: ಕೋವಿಡ್ ಲಾಕ್‌ಡೌನ್‌ ಮುಗಿಯುವವರೆಗೆ ಖಾಸಗಿ ವೈದ್ಯರ ಆರೋಗ್ಯ ರಕ್ಷಣೆ ಹಾಗೂ ಬಡವರ ಹೊಟ್ಟೆ ತುಂಬಿಸುವ ಜವಾಬ್ದಾರಿ ನನ್ನದಾಗಿದೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ವಾಗ್ಧಾನ ಮಾಡಿದ್ದಾರೆ.

Advertisement

ಪಟ್ಟಣದ ದಾಸೋಹ ನಿಲಯದಲ್ಲಿ ಶುಕ್ರವಾರ ಖಾಸಗಿ ವೈದ್ಯರು, ಪತ್ರಕರ್ತರಿಗೆ ಗುಣಮಟ್ಟದ ಮಾಸ್ಕ್ ವಿತರಿಸಿ, ಸಂಕಷ್ಟ ಹೇಳಿಕೊಳ್ಳಲು ಬಂದಿದ್ದ ಬಡ ಮಹಿಳೆಯರ ಅಳಲು ಆಲಿಸಿ ಅವರು ಮಾತನಾಡಿದರು. ವೈದ್ಯರ ಬೇಡಿಕೆಯಂತೆ ಮಾಸ್ಕ್ವಿ ತರಿಸಲಾಗಿದೆ. ಪಿಪಿಇ ಕಿಟ್‌ ಅಗತ್ಯ ಕಂಡು ಬಂದಲ್ಲಿ ಪೂರೈಸಲಾಗುತ್ತದೆ. ಕೊರೊನಾ ಆತಂಕ ಇಲ್ಲದೆ ಕ್ಲಿನಿಕ್‌, ಆಸ್ಪತ್ರೆ ಪ್ರಾರಂಭಿಸಿ ಎಂದಿನಂತೆ ರೋಗಿಗಳ ಸೇವೆ ಮುಂದುವರಿಸಿ. ಜಿಲ್ಲಾಡಳಿತದ ಸೂಚನೆಯಂತೆ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸಿ. ಈ ಕುರಿತ ನೋಟಿಸ್‌ನ್ನು ಆಸ್ಪತ್ರೆಗಳ ಮುಂದೆ ಅಂಟಿಸಿ. ಕಠಿಣ ಪರಿಸ್ಥಿತಿಯಲ್ಲಿ ಸೇವೆಗೆ ಸಿದ್ಧರಿರುವ ನಮ್ಮ ವೈದ್ಯರ ಸೇವೆ ಬಳಸಿಕೊಳ್ಳಲು ಜಿಲ್ಲಾ ಧಿಕಾರಿಗೆ ತಿಳಿಸಿದ್ದೇನೆ ಎಂದರು.

ಪಟ್ಟಣ ಪ್ರದೇಶದ ಬಡವರು ಲಾಕ್‌ಡೌನ್‌ನಿಂದ ತೊಂದರೆಯಲ್ಲಿರುವುದನ್ನು ಮನಗಂಡು ತಾಲೂಕಿನ ಮೂರು ಪಟ್ಟಣಗಳ 15-20 ಸಾವಿರ ಕಡುಬಡವರಿಗೆ ಸೋಮವಾರದಿಂದ ಆಹಾರ ಸಾಮಗ್ರಿ ಕಿಟ್‌ ವಿತರಿಸುತ್ತಿದ್ದೇನೆ. ಕಿಟ್‌ ದೊರಕದ ನಿಜವಾದ ಬಡವರು ನನ್ನ ಗಮನಕ್ಕೆ ತಂದಲ್ಲಿ ಅಂಥವರ ಮನೆಗೇ ಕಿಟ್‌ ತಲುಪಿಸಲಾಗುತ್ತದೆ ಎಂದರು.

ಡಾ| ವೀರೇಶ ಪಾಟೀಲ ಅವರು ರೋಗಿಗಳ ಚಿಕಿತ್ಸೆಗೆ ಶಾಸಕರು ನೀಡಿದ ಸಲಹೆ ಪಾಲಿಸಿ ಆಸ್ಪತ್ರೆ ಪ್ರಾರಂಭಿಸುವಂತೆ ಮನವಿ ಮಾಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಡಾ| ಉತ್ಕರ್ಷ ನಾಗೂರ, ಡಾ| ಡಿ.ಬಿ. ಓಸ್ವಾಲ್‌, ಡಾ| ಸಿ.ಎಚ್‌.ನಾಗರಬೆಟ್ಟ, ಡಾ| ಎಂ.ಎಂ. ಹಿರೇಮಠ, ಡಾ| ವೀರೇಶ ಇಟಗಿ, ಡಾ| ವಿಜಯಕುಮಾರ ನಾಯಕ, ಡಾ| ಶಿವಯೋಗಿಮಠ ಸೇರಿದಂತೆ ಪಟ್ಟಣದ ಖಾಸಗಿ ವೈದ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next