ಮುದ್ದೇಬಿಹಾಳ: ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಕುರಿಗಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ- ತಾಳಿಕೋಟ ರಾಜ್ಯ ಹೆದ್ದಾರಿಯ ಕುಂಟೋಜಿ ಗ್ರಾಮದ ಹತ್ತಿರ ನಡೆದಿದೆ.
ಮೃತನನ್ನು ಚಿಕ್ಕೋಡಿ ಮೂಲದ ನಿಂಗಪ್ಪ ಹಾಲಪ್ಪ ಕದ್ದಿ (50) ಎಂದು ಗುರುತಿಸಲಾಗಿದೆ.
ಬೈಕ್ ಸವಾರ ಕವಡಿಮಟ್ಟಿ ಗ್ರಾಮದ ಹಣಮಂತ ನಿಂಗಪ್ಪ ಮಾದರಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿಂಗಪ್ಪನು ಸಹಪಾಠಿಗಳ ಜೊತೆ ಕುರಿ ಹಿಂಡನ್ನು ಮೇಯಿಸುತ್ತ ಊರಿಂದ ಊರಿಗೆ ಸಂಚರಿಸುವವನು ಎನ್ನಲಾಗಿದೆ.
ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸೈ ಆರೀಫ ಮುಷಾಪುರಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.