ಮುದ್ದೇಬಿಹಾಳ : ಪಟ್ಟಣದಲ್ಲಿ ಮಂಗಳವಾರ ಸಂಜೆ ಬೀಸಿದ ಭಾರೀ ಬಿರುಗಾಳಿ ಹಾಗೂ ಮಳೆಗೆ ಗಣೇಶನಗರದ ಶ್ರೀ ಗಿರಿಜಾ ಶಂಕರ ಚಿತ್ರಮಂದಿರ ಬಳಿ ಮಲ್ಲಿಕಾರ್ಜುನ ಖಾನಾವಳಿ ಮುಖ್ಯ ರಸ್ತೆಯ ಮೇಲೆ ಬೇವಿನ ಮರವೊಂದು ಬೈಕ್ ಮೇಲೆ ಉರುಳಿ ಬಿದ್ದ ಪರಿಣಾಮ ಇಂಗಳಗೇರಿಯ ಬಿರಾದಾರ ಎನ್ನುವವರಿಗೆ ಸೇರಿದ ಬೈಕ್ ಸಂಪೂರ್ಣ ಜಖಂಗೊಂಡಿದೆ.
ಬೈಕ್ ಸಮೀಪದಲ್ಲಿ ಇದ್ದ ಬಾಲಕಿಯೋರ್ವಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ಮರದ ಕೊಂಬೆಗಳು ಗೂಡ್ಸ್ ಆಟೋ ಮೇಲೆ ಬಿದ್ದು ಆಟೋ ಜಖಂಗೊಂಡಿದೆ.
ವಿದ್ಯಾನಗರದಲ್ಲಿರುವ ಅಭ್ಯುದಯ ಇಂಟರ್ನ್ಯಾಶನಲ್ ಸ್ಕೂಲ್ ಎದುರಿಗೆ ಹಾಕಿದ್ದ ಡಬ್ಬಾ ಅಂಗಡಿಯೊಂದು ಉರುಳಿ ಬಿದ್ದಿದೆ. ಆಲಮಟ್ಟಿ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ತಿರುವಿನಲ್ಲಿ ಬೇವಿನ ಮರದ ಬೃಹತ್ ಟೊಂಗೆ ಮುರಿದು ಬಿದ್ದು ಸಂಚಾರ ಸಮಸ್ಯೆ ತಲೆದೋರಿತ್ತು.
ಇಷ್ಟೆಲ್ಲಾ ಅನಾಹುತ ಆಗಿದ್ದರೂ ಯಾವುದೇ ಸಾವು, ನೋವು ವರದಿಯಾಗಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಂತೆ ಹವಾಮಾನ ಬದಲಾವಣೆಯ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ತಾಲುಕಾಡಳಿತ ಮನವಿ ಮಾಡಿದೆ.
Related Articles
ಇದನ್ನೂ ಓದಿ : ನಕಲಿ ದಾಖಲೆ ಮೂಲಕ ಹಕ್ಕುಪತ್ರ ಪಡೆದ ಪ್ರಕರಣ : ಹಕ್ಕುಪತ್ರ ರದ್ದುಪಡಿಸಿ ತಹಶೀಲ್ದಾರ್ ಆದೇಶ