Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಅನ್ನ ದಾಸೋಹ

12:32 PM Apr 10, 2020 | Naveen |

ಮುದ್ದೇಬಿಹಾಳ: ಲಾಕ್‌ಡೌನ್‌ ಮುಗಿದು ಜನಜೀವನ ಸಹಜಸ್ಥಿತಿಗೆ ಮರಳುವ ವರೆಗೂ ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳು, ಅವರ ಜತೆಗಾರರಿಗೂ ನನ್ನ ಕುಟುಂಬದ ವತಿಯಿಂದ ವೈಯುಕ್ತಿವಾಗಿ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿದ್ದು, ಪ್ರತಿಯೊಬ್ಬರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎ.ಎಸ್‌ .ಪಾಟೀಲ ನಡಹಳ್ಳಿ ಮನವಿ ಮಾಡಿದ್ದಾರೆ.

Advertisement

ಮುದ್ದೇಬಿಹಾಳ ಪಟ್ಟಣದ ತಾಲೂಕು ಆಸ್ಪತ್ರೆ ಆವರಣದಲ್ಲಿ ಬುಧವಾರ ರೋಗಿಗಳಿಗೆ ಸಾಂಕೇತಿಕವಾಗಿ ಆಹಾರ ವಿತರಿಸಿ ಮಾತನಾಡಿದ ಅವರು, ಪ್ರಸಕ್ತ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳೆಲ್ಲ ಮುಚ್ಚಿವೆ. ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಏನೂ ಸಿಗದ ಪರಿಸ್ಥಿತಿ ನಿವಾರಿಸಲು ಈ ಯೋಜನೆಗೆ ಚಾಲನೆ ನೀಡಿದ್ದೇನೆ ಎಂದರು.

ಈ ತಾಲೂಕಿನಲ್ಲಿರುವ ಯಾರೊಬ್ಬರೂ ಊಟ ಇಲ್ಲದೆ ಹಸಿವಿನಿಂದ ಬಳಲಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಕಾಳಗಿ, ತಾಳಿಕೋಟೆ, ನಾಲತವಾಡ ಸಮುದಾಯ ಕೇಂದ್ರಗಳಲ್ಲಿ ಏಕಕಾಲಕ್ಕೆ ಜಾರಿಗೊಳಿಸಲಾಗಿದೆ. ಒಂದೆರಡು ದಿನಗಳಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಜಾರಿಗೊಳಿಸಲಾಗುತ್ತದೆ. ಇದರ ಉಸ್ತುವಾರಿ ಹೊಣೆಯನ್ನು ಆರೋಗ್ಯ ಇಲಾಖೆಯವರಿಗೆ, ಅಡುಗೆ ತಯಾರಿಸುವ ಹೊಣೆಯನ್ನು ಸಮಾಜಕಲ್ಯಾಣ ಇಲಾಖೆಯವರಿಗೆ ವಹಿಸಿಕೊಡಲಾಗಿದೆ. ಪೊಲೀಸ್‌ ಇಲಾಖೆಯ ಸುಪರ್ದಿಯಲ್ಲಿ ಅಡುಗೆಯನ್ನು ನಿಗದಿಪಡಿಸಿದ ವಾಹನಗಳಿಂದ ಆಸ್ಪತ್ರೆಗಳಿಗೆ ಒಯ್ಯಲಾಗುತ್ತದೆ. ಆಶಾ ಕಾರ್ಯಕರ್ತೆಯರು ಉಣಬಡಿಸುತ್ತಾರೆ. ಹೀಗಾಗಿ ಎಲ್ಲೂ ಲೋಪ ಆಗದಂತೆ ಗುಣಮಟ್ಟ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ ಎಂದರು.

ಇದಕ್ಕೂ ಮುನ್ನ ಸಮಾಜಕಲ್ಯಾಣ ಇಲಾಖೆಯ ಬಾಲಕರ ಹಾಸ್ಟೇಲಿಗೆ ಅ ಧಿಕಾರಿಗಳೊಂದಿಗೆ ಭೇಟಿಕೊಟ್ಟ ಶಾಸಕರು ಅಡುಗೆ ತಯಾರಿಸುವ ವ್ಯವಸ್ಥೆ ಪರಿಶೀಲಿಸಿ, ಅಧಿಕಾರಿಗಳ ಜತೆ ತಾವೂ ಸೇವಿಸುವ ಮೂಲಕ ಗುಣಮಟ್ಟ ಪ್ರಾಯೋಗಿಕವಾಗಿ ಖಚಿತಪಡಿಸಿಕೊಂಡರು. ಅಡುಗೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿ ಇದರಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಅಗತ್ಯ ಸಲಹೆ ಸೂಚನೆ ನೀಡಿದರು. ರೋಗಿಗಳಿಗೆ ಪ್ರತ್ಯೇಕ ಶುದ್ಧ ಕುಡಿವ ನೀರಿನ, ಕೈತೊಳೆದುಕೊಳ್ಳುವ, ಊಟದ ತಟ್ಟೆಗಳನ್ನು ಒಂದೇ ಕಡೆ ಹಾಕುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ತಹಸೀಲ್ದಾರ್‌ ಜಿ.ಎಸ್‌.ಮಳಗಿ, ತಾಲೂಕು ಆರೋಗ್ಯಾ ಧಿಕಾರಿ ಡಾ| ಸತೀಶ ತಿವಾರಿ, ಸಮಾಜಕಲ್ಯಾಣಾಧಿ ಕಾರಿ ಎನ್‌.ಆರ್‌. ಉಂಡಿಗೇರಿ, ಸಿಪಿಐ ಆನಂದ ವಾಗಮೋಡೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ, ಡಾ| ಪ್ರವೀಣ ಸುಣಕಲ್ಲ, ಪುರಸಭೆ ಮುಖ್ಯಾಧಿ
ಕಾರಿ ಗೋಪಾಲ ಕಾಸೆ, ತಾಲೂಕು ಬಿಜೆಪಿ ಅಧ್ಯಕ್ಷ ಡಾ| ಪರಶುರಾಮ ಪವಾರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಆರೋಗ್ಯ ಮತ್ತು ಸಮಾಜಕಲ್ಯಾಣ ಇಲಾಖೆ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next