Advertisement

Muddebihal: ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು: 200 ಎಕರೆಗೂ ಹೆಚ್ಚು ಬೆಳೆ ಹಾನಿ

11:59 AM Aug 09, 2023 | Team Udayavani |

ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಹತ್ತಿರ ಹಾಯ್ದು ಹೋಗಿರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಲ್ಲಿ ಹರಿಯುತ್ತಿದ್ದು ಅಂದಾಜು 200 ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗುವ ಆತಂಕ ಉಂಟಾಗಿದೆ.

Advertisement

25 ವರ್ಷಗಳ ಹಿಂದೆ ಕಳಪೆ ಗುಣಮಟ್ಟದಲ್ಲಿ ಕಾಲುವೆ ನಿರ್ಮಿಸಿದ್ದು ಮತ್ತು ರೈತರು ಕಾಲುವೆಯ ಗೋಡೆಗೆ ತೂಬು ಕೊರೆದು ಹೊಲಗಳಿಗೆ ನೀರು ಹರಿಸಲು ಪೈಪ್ ಹಾಕಿಕೊಂಡಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಕೆಬಿಜೆಎನ್ನೆಲ್ ಕಾಲುವೆ ವಿಭಾಗದ ಕಾರ್ಯ ಪಾಲಕ ಅಭಿಯಂತರ ಆರ್.ಎಂ.ಹಳ್ಳೂರ, ಎಇಇಗಳಾದ ಅಬೂಬಕರ್ ಬಾಗವಾನ, ಅಶೋಕ ಬಿರಾದಾರ ಭೇಟಿ ನೀಡಿದ್ದಾರೆ. ಕಾಲುವೆಯ ಒಡೆದ ಭಾಗದಲ್ಲಿ ಮಣ್ಣು ಹಾಕಿ ನೀರಿನ ಹರಿವು ನಿಲ್ಲಿಸುವ ವಿಫಲ ಪ್ರಯತ್ನಗಳು ನಡೆಯುತ್ತಿದೆ. ಕಳಪೆ ಕಾಮಗಾರಿ ಕಾಲುವೆ ಒಡೆಯಲು ಕಾರಣವಾಗಿದ್ದು ಬೆಳೆಹಾನಿಗೆ ಕೂಡಲೇ ಪರಿಹಾರ ಕೊಡಬೇಕು ಮತ್ತು ಕಾಲುವೆಯನ್ನು ಆಧುನೀಕರಣಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Crime News: ಕುಡುಮಲ್ಲಿಗೆ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ: 2ಲಕ್ಷ ಮೌಲ್ಯದ ವಸ್ತುಗಳು ಕಳವು

Advertisement

Udayavani is now on Telegram. Click here to join our channel and stay updated with the latest news.

Next