Advertisement

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

08:49 PM Oct 30, 2024 | sudhir |

ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಭಾಗ್ಯಾ ಮಹೇಶ ಮುರಾಳ ಎನ್ನುವವರ ಮನೆಯ ಮುಂದೆ ಇದ್ದ ಭಾರಿ ಎತ್ತರದ ತೆಂಗಿನ ಮರ ಏರಿ ತೆಂಗಿನ ಕಾಯಿ ಮತ್ತು ಒಣಗಿದ ಗರಿ ಕೆಳಗೆ ಇಳಿಸುವಾಗ ಮೇಲಿಂದ ಜಾರಿ ನೆಲಕ್ಕೆ ಬಿದ್ದು 21 ವರ್ಷದ ಅವಿವಾಹಿತ ಯುವಕ ಸಂತೋಷ ಶರಣಪ್ಪ ವಾಲಿಕಾರ ಸಾವನ್ನಪ್ಪಿರುವ ಘಟನೆ ಬುಧವಾರ(ಅ.30) ನಡೆದಿದೆ.

Advertisement

ಸಂತೋಷ ನೆರಬೆಂಚಿ ಗ್ರಾಮದವನಾಗಿದ್ದು ತನ್ನೂರಲ್ಲೇ ಕುರಿ ಕಾಯುತ್ತಿದ್ದ. ತೆಂಗಿನ ಮರ ಸ್ವಚ್ಛಗೊಳಿಸಿದರೆ ಕೂಲಿ ಸಿಗುತ್ತದೆ ಎನ್ನುವ ಆಸೆಗೆ ಬಿದ್ದು ತನ್ನೂರಿನಿಂದ 10 ಕಿಮಿ ದೂರದಲ್ಲಿರುವ ಕವಡಿಮಟ್ಟಿಗೆ ಬಂದಿದ್ದ. 4-5 ಮನೆಗಳ ಮುಂದಿನ ತೆಂಗಿನ ಮರ ಸ್ವಚ್ಛಗೊಳಿಸಿದ್ದ ಈತ ಮುರಾಳ ಅವರ ಮನೆಯ ಮುಂದಿದ್ದ ಬಹಳಷ್ಟು ಎತ್ತರದ ಮರ ಏರಿದ್ದ. ಎಲ್ಲರೂ ನೋಡುತ್ತಿದ್ದಂತೆಯೇ ಅಂದಾಜು 50-60 ಅಡಿ ಎತ್ತರದಿಂದ ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾನೆ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಎಫ್ಐಆರ್ ವಿಳಂಬ:
ಘಟನೆ ಬೆಳಿಗ್ಗೆ ನಡೆದಿದ್ದರೂ ರಾತ್ರಿ 8-30 ಗಂಟೆಯಾದರೂ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿತ್ತು. ಎಫ್ಐಆರ್ ದಾಖಲಾಗದೆ ಶವದ ಮರಣೋತ್ತರ ಪರೀಕ್ಷೆ ನಡೆಯುವುದಿಲ್ಲ. ಹೀಗಾಗಿ ರಾತ್ರಿಯಾದರೂ ಶವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಯೇ ಅನಾಥವಾಗಿ ಇತ್ತು. ಎಫ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ರಾತ್ರಿ ಮರಣೋತ್ತರ ಪರೀಕ್ಷೆ ನಡೆಯಬಹುದು ಎನ್ನಲಾಗುತ್ತಿದೆ.

6 ಜನರ ವಿರುದ್ಧ ದೂರು:
ಮೃತ ಸಂತೋಷನ ತಂದೆ ಶರಣಪ್ಪ ಅಡಿವೆಪ್ಪ ವಾಲಿಕಾರ ಅವರು ಕವಡಿಮಟ್ಟಿಯ ಪ್ರಶಾಂತ ಮಹೇಶ ಮುರಾಳ, ಭಾಗ್ಯ ಮಹೇಶ ಮುರಾಳ, ಪವಿತ್ರಾ ಮಹೇಶ ಮುರಾಳ, ಉಮೇಶ ಸಿದ್ರಾಮಪ್ಪ ಮುರಾಳ, ಪರಪ್ಪ ಸಿದ್ರಾಮಪ್ಪ ಮುರಾಳ ಇವರು ಸಂತೋಷನನ್ನು ಎತ್ತರವಾದ ತೆಂಗಿನ ಮರ ಏರಲು ಒತ್ತಾಯಿಸಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆ ಎಂದು ಲಿಖಿತ ದೂರು ನೀಡಿದ್ದು ರಾಜಕೀಯ ವ್ಯಕ್ತಿಗಳಿಂದ ನನಗೆ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿದ್ದಾರೆ.

ಇದನ್ನೂ ಓದಿ: Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next