Advertisement

ಬೈಕ್ ತಪ್ಪಿಸಲು ಹೋಗಿ ಬೊಲೇರೊ ಪಿಕಪ್ ಪಲ್ಟಿ: ಇಬ್ಬರ ಸ್ಥಿತಿ ಚಿಂತಾಜನಕ

01:41 PM Jun 30, 2022 | Team Udayavani |

ಮುದ್ದೇಬಿಹಾಳ: ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಬೊಲೆರೋ ಪಿಕಪ್ ವಾಹನ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಮುದ್ದೇಬಿಹಾಳ ಪಟ್ಟಣದ ಹೊರವಲಯದ ನಾಲತವಾಡ ಮುಖ್ಯ ರಸ್ತೆಯ ನಾಡಗೌಡರ ತೋಟದ ಬಳಿ ನಡೆದಿದೆ.

Advertisement

ಘಟನೆ ಪರಿಣಾಮ ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಮುರಾಳ ಗ್ರಾಮದ ಅಶೋಕ ಚಲವಾದಿ, ದಾವಲಸಾಬ ಹಾದಿಮನಿ, ಭೀಮನಗೌಡ ಬಿರಾದಾರ ಗಾಯಗೊಂಡವರಾಗಿದ್ದು ಇವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಗ್ಮೋಡೆ, ಪಿಎಸ್‌ಐ ರೇಣುಕಾ ಜಕನೂರ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.

ಶಾಸಕರಿಂದ ನೆರವು: ಗಾಯಾಳುಗಳನ್ನು ಸರ್ಕಾರಿ ಅಸ್ಪತ್ರೆಗೆ ಕರೆ ತಂದಾಗ ಸ್ಥಳೀಯ ಶಾಸಕ, ಕರ್ನಾಟಕ ಆಹಾರ ನಿಗಮದ ಅದ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಅಸ್ಪತ್ರೆಯಲ್ಲೇ ಇದ್ದರು. ವಿಷಯ ತಿಳಿದು ಬಂದ ಅವರು ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲೇ ಗಂಭೀರ ಗಾಯಗೊಂಡ ಇಬ್ಬರಿಗೂ ತಲಾ 25,000 ದಂತೆ 50,000 ವೈಯುಕ್ತಿಕ ಸಹಾಯಧನ ವಿತರಿಸಿದರು. ಬಾಗಲಕೋಟೆಯ ಕಟ್ಟಿ ಆಸ್ಪತ್ರೆಯ ವೈದ್ಯರಾದ ಡಾ.ಕಟ್ಟಿ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿ, ಉತ್ತಮ ಚಿಕಿತ್ಸೆ ಕೊಡುವಂತೆ ಹಾಗೂ ಅವರ ಸಂಪೂರ್ಣ ಖರ್ಚನ್ನು ತಾವೇ ಭರಿಸುವುದಾಗಿ ತಿಳಿಸಿ ಮಾನವೀಯತೆ ಮೆರೆದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next