ಕುಣಿಗಲ್: ತಮ್ಮ ಮೂಲ ವಕೀಲ ವೃತ್ತಿಗೆ ಮರಳಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬುಧವಾರ ಕುಣಿಗಲ್ ಹಿರಿಯ ಸಿವಿಲ್ ನ್ಯಾಯಾಯಲದಲ್ಲಿ ಸಿವಿಲ್ ಮೊಕ್ಕದ್ದೊಮೆಯೊಂದರಲ್ಲಿ ವಾದ ಮಾಡಿದರು.
ಸುಮಾರು 30 ವರ್ಷಗಳ ನಂತರ ವಕೀಲ ವೃತ್ತಿಗೆ ಮರಳಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಶಾಸಕರಾಗಿ ಆಯ್ಕೆಯಾಗುವ ಮೊದಲು ವಕೀಲ ವೃತ್ತಿಯನ್ನು ಕುಣಿಗಲ್‌ನಲ್ಲಿ ಆರಂಭಿಸಿದರು. ನಂತರ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದರು. ನಂತರದ ದಿನಗಳಲ್ಲಿ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಎರಡು ಭಾರೀ ಶಾಸಕರಾಗಿ ಒಂದು ಭಾರೀ ಸಂಸದರಾಗಿ ಚುನಾಯಿತರಾಗಿ ಸೇವೆಸಲ್ಲಿಸಿದರು.
ಈಗ ತುಂಬಾ ವರ್ಷಗಳ ನಂತರ ತಮ್ಮ ಮೂಲ ವಕೀಲ ವೃತ್ತಿಗೆ ಮರಳಿ ಬಂದಿದ್ದಾರೆ. ಈ ಸಂಬಂಧ ಬುಧವಾರ ಕುಣಿಗಲ್ ನ್ಯಾಯಾಲಯಕ್ಕೆ ಕಪ್ಪು ಕೋಟ್ ಧರಿಸಿ ಆಗಮಸಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ವಕೀಲ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರುಗಳು ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ.ಮುದ್ದಹನುಮೇಗೌಡ ಬಹಳ ವರ್ಷಗಳ ನಂತರ ನನಗೆ ನ್ಯಾಯಾಲಯದಲ್ಲಿ ವಾದ ಮಾಡುವ ಅವಕಾಶ ಸಿಕ್ಕಿದೆ. ಕುಣಿಗಲ್ ತಾಲೂಕು ನನಗೆ ಎಲ್ಲಾ ರೀತಿಯ ಶಕ್ತಿ ನೀಡಿದೆ. ಶಾಸಕನಾಗಿ ಸಂಸದನಾಗಿ ಹಾಗೂ ವಿಶ್ವ ಸಂಸ್ಥೆಯಂತ ದೊಡ್ಡ ಸಂಸ್ಥೆಯಲ್ಲಿ ಭಾಗವಹಿಸಿ ಮಾತನಾಡುವ ಅವಕಾಶವನ್ನೂ ಸಹ ನೀಡದೆ ಇದಕ್ಕೆ ಕುಣಿಗಲ್ ನ್ಯಾಯಾಲಯವೇ ನನಗೆ ಸ್ಪೂರ್ತಿಯಾಗಿದೆ. ಕಾರಣ ನಾನು ಮೊದಲು ನನ್ನ ವಕೀಲ ವೃತ್ತಿಯನ್ನು ಕುಣಿಗಲ್ ನ್ಯಾಯಾಲಯದಿಂದಲೇ ನಾನು ಆರಂಭಿಸಿದ್ದೇ. ಸಂಸದನಾಗಿದ್ದಾಗ ಕುಣಿಗಲ್ ತಾಲೂಕು ನನ್ನ ವ್ಯಾಪ್ತಿಗೆ ಸೇರಿರಲಿಲ್ಲ ಆದ್ದರಿಂದ ಇಲ್ಲಿನ ಜನರಿಗೆ ನನ್ನ ಸೇವೆ ಲಭ್ಯವಾಗಲಿಲ್ಲ. ಈ ಸಂಬಂಧ ಇನ್ನೂ ಮುಂದೆ ಕುಣಿಗಲ್ ತಾಲೂಕಿನ ಜನತೆಗೆ ನನ್ನ ಕೈಲಾದ ಸೇವೆ ಸಲ್ಲಿಸುವ ಉದ್ದೇಶದಿಂದ ಕ್ರೀಯಾಶೀಲರಾಗಿ ಮುಂದುವರಿಯುವೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿಯೂ ಇನ್ನೂ ಮುಂದೆ ಕುಣಿಗಲ್ ಕ್ಷೇತ್ರದಲ್ಲಿ ಸಕ್ರೀಯವಾಗಿ ಇರುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ : ತನ್ನ ಮಗನನ್ನು ಸರಕಾರಿ ಶಾಲೆಗೆ ಸೇರಿಸಿ ಮಾದರಿಯಾದ ಪ್ರಧಾನ ಸಿವಿಲ್ ನ್ಯಾಯಾಧೀಶರು
ವಕೀಲ ಸಂಘದ ಅಧ್ಯಕ್ಷ ಹುಚ್ಚೇಗೌಡ, ಹಿರಿಯ ವಕೀಲರಾದ ಕೆ.ಎನ್ ರಾಮಚಂದ್ರಯ್ಯ, ನಿಸಾರ್ ಅಹಮದ್, ಗುಂಡಪ್ಪ, ವೆಂಕಟರಾಮು, ಜಗದೀಶ್, ರವೀಚಂದ್ರ, ಯಲಗಲವಾಡಿ ಶಿವಶಂಕರ್, ಕಾಂಗ್ರೇಸ್ ಮುಖಂಡ ಕೆಂಪೀರೇಗೌಡ ಮುಂತಾದವರು ಹಾಜರಿದ್ದರು.
ಕುಣಿಗಲ್ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕುಣಿಗಲ್ ಕ್ಷೇತ್ರದಿಂದ ನನಗೆ ಟೀಕೆ ಕೊಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಬಳಿ ಎಸ್‌ಪಿಎಂ ಈಗಾಗಲೇ ಪ್ರಸ್ತಾವನೆ ಇಟ್ಟಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಪ್ರತ್ರಿಯೊಂದು ಮದುವೆ, ಸಾವು ಮುಂತಾದ ಕಾರ್ಯಕ್ರಮದಲ್ಲಿ ವಾಗವಹಿಸುವ ಮೂಲಕ ಕ್ಷೇತ್ರದಲ್ಲಿ ಸಂಚರಿಸುತ್ತಿರುವುದು
ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಎಸ್‌ಪಿಎಂ ಅವರ ಸ್ಪರ್ದೆ ಕುಣಿಗಲ್ ನಿಂದ ಖಚಿತ ಎಂದು ಎಸ್.ಪಿ.ಎಂ. ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ.