Advertisement

ಮುದ್ದಾದ ಮೂತಿ ಮನಸ್ಸು ಮರಕೋತಿ.. ಮಾನ್ಸೂನ್‌ ರಾಗದ ಮತ್ತೊಂದು ಹಾಡು

02:58 PM Aug 04, 2022 | Team Udayavani |

ಧನಂಜಯ್‌ ನಾಯಕರಾಗಿರುವ “ಮಾನ್ಸೂನ್‌ ರಾಗ’ ಚಿತ್ರ ಆಗಸ್ಟ್‌ 19ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರತಂಡ ಹಾಡುಗಳ ಬಿಡುಗಡೆಗೆ ಮುಂದಾಗಿದೆ. ಈಗಾಗಲೇ “ರಾಗ ಸುಧಾ’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಅದು ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ.

Advertisement

“ಮುದ್ದಾದ ಮೂತಿ’ ಎಂಬ ವಿಡಿಯೋ ಸಾಂಗ್‌ ಇತ್ತೀಚೆಗೆ ರಿಲೀಸ್‌ ಆಗಿದ್ದು, ಈ ಹಾಡನ್ನು ಅಚ್ಯುತ್‌ ಕುಮಾರ್‌ ಮೇಲೆ ಮಾಡಲಾಗಿದ್ದು, ಸಖತ್‌ ಕಲರ್‌ಫ‌ುಲ್‌ ಆಗಿ ಚಿತೀಕರಿಸಲಾಗಿದೆ. ಪ್ರಮೋದ್‌ ಮರವಂತೆ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್‌ ಅವರ ಧ್ವನಿ ಇದೆ.

ಈಗಾಗಲೇ ಬಿಡುಗಡೆಯಾಗಿರುವ “ರಾಗ ಸುಧಾ’ ಹಾಡಿನಲಿ ಯಶಾ ಶಿವಕುಮಾರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದು, ದಕ್ಷಿಣ್‌ ಕುಮಾರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಯಶಾ ಇಂಟ್ರೊಡಕ್ಷನ್‌ಗಾಗಿಯೇ ಮಾಡಿದ ಹಾಡು ಎಂಬುದು ವಿಶೇಷವಾದರೆ, ಇದನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಓದಿದ ಕುಮಟಾ ಬಳಿಯ ಶಾಲೆಯೊಂದರಲ್ಲಿ ಚಿತ್ರೀಕರಣ ನಡೆಸಿರುವುದು ಮತ್ತೂಂದು ವಿಶೇಷ.

ಮಳೆಯ ಭೋರ್ಗರೆತದ ನಡುವೆ ಕುಣಿವ ಯಶಾ, ರೆಟ್ರೋ ಸ್ಟೈಲ್‌ ನಲ್ಲಿ ಕಂಗೊಳಿಸಿದ್ದಾರೆ. ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್‌ ವಿಕ್ರಂ, ರಂಗನಾಯಕ ಸಿನಿಮಾಗಳನ್ನು ನಿರ್ಮಿಸಿರುವ ಎ.ಆರ್‌.ವಿಖ್ಯಾತ್‌ “ಮಾನ್ಸೂನ್‌ ರಾಗ’ಕ್ಕೆ ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಬಂಡವಾಳ ಹೂಡಿದ್ದಾರೆ. ವಿಖ್ಯಾತ್‌ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿ ಲಕ್ಷಾಂತರ ಹಿಟ್ಸ್‌ ದಾಖಲಾಗಿದೆ.

ಇದನ್ನೂ ಓದಿ:ಹರೀಶ್‌ ರಾಜ್ ಜರ್ನಿಗೆ 25 ವರ್ಷ: ಸಿನಿಯಾನ ಹಂಚಿಕೊಂಡ ನಟ

Advertisement

“ವಿಖ್ಯಾತ್‌ ಚಿತ್ರ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ಎ. ಆರ್‌ ವಿಖ್ಯಾತ್‌ ನಿರ್ಮಿಸಿರುವ, ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಕಂ ಆ್ಯಕ್ಷನ್‌ ಕಥಾಹಂದರ ಹೊಂದಿರುವ “ಮಾನ್ಸೂನ್‌ ರಾಗ’ ಚಿತ್ರಕ್ಕೆ ಎಸ್‌. ರವೀಂದ್ರನಾಥ್‌ ನಿರ್ದೇಶನವಿದೆ. ಚಿತ್ರಕ್ಕೆ ಎಸ್‌. ಕೆ ರಾವ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ.  ಚಿತ್ರದ ಹಾಡುಗಳಿಗೆ ಜೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, ಗುರು ಕಶ್ಯಪ್‌ ಸಿನಿಮಾದ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ “ಮಾನ್ಸೂನ್‌ ರಾಗ್‌’ ಟೀಸರ್‌ನಲ್ಲಿ ನಟ ಧನಂಜಯ್‌ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಪಕ್ಕಾ ಆ್ಯಕ್ಷನ್‌ ಗೆಟಪ್‌ನಲ್ಲಿ ರಗಡ್‌ ಆಗಿ ಕಾಣಿಸಿಕೊಂಡರೆ, ಇನ್ನೊಂದೆಡೆ ಸಖತ್‌ ಸಾಫ್ಟ್ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next