Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಬಿಇಒ ಭೇಟಿ

05:10 PM Jun 10, 2020 | Naveen |

ಮುದಗಲ್ಲ: ಪಟ್ಟಣದಲ್ಲಿ ನಡೆಯುವ ಹತ್ತನೇ ತರಗತಿ ಪರೀಕ್ಷೆ ಕೇಂದ್ರಗಳಿಗೆ ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಕಂಬಾರ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ 380 ವಿದ್ಯಾರ್ಥಿ, ಆರ್‌.ಸಿ. ಮೀಷನ್‌ ಶಾಲೆ 260 ವಿದ್ಯಾರ್ಥಿಗಳು ಹಾಗೂ ಮದರ್ ತೇರೆಸಾ ಶಾಲೆಯಲ್ಲಿ 275 ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿಯೊಂದು ಪರೀಕ್ಷೆ ಕೇಂದ್ರಗಳಿಗೆ ಆರೋಗ್ಯ ಇಲಾಖೆಯಿಂದ ರಾಸಾಯನಿಕ ದ್ರವ ಸಿಂಪಡಣೆ ಮಾಡಲಾಗುವುದು. ಹಟ್ಟಿಚಿನ್ನದಗಣಿ ಕಂಪನಿಯಿಂದ ಒಬ್ಬ ವಿದ್ಯಾರ್ಥಿಗೆ ಎರಡು ಮಾಸ್ಕ್, ಪರೀಕ್ಷೆ ಕೇಂದ್ರಕ್ಕೆ 40 ಲೀಟರ್‌ ಸ್ಯಾನಿಟೈಸರ್‌ ಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌ ಹಾಗೂ ಥರ್ಮಲ್‌ ಸ್ಕಾÂನರ್‌ ಮಾಡಲಾಗುವುದು. ಒಂದು ಪರೀಕ್ಷೆ ಕೇಂದ್ರಕ್ಕೆ ಎರಡು ಕೊಠಡಿ ಕಾಯ್ದಿರಿಸಲಾಗಿರುತ್ತದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಕಂಡು ಬಂದರೆ ಕಾಯ್ದಿಸಿದ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುವುದು ಎಂದು ಹೇಳಿದರು. ಹತ್ತನೇ ತರಗತಿ ಪೂರ್ವ ತಯಾರಿ ಹಾಗೂ ಪರೀಕ್ಷೆ ನೆಡೆಸುವ ನಿಯಮ ಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಪಟ್ಟಣದಲ್ಲಿ ಯಾರಾದರೂ ದಾನಿಗಳು ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ದಾನ ಮಾಡಬಹುದು ಎಂದು ಹೇಳಿದರು.

ಮುಖ್ಯಶಿಕ್ಷಕರಾದ ಡಿ.ಕೆ. ಪೂಜಾರಿ, ರಮೇಶ ದಿಕ್ಷೀತ, ಮಹ್ಮದ್‌ ಷರೀಫ್‌, ಸಂಗಮೇಶ ಮೂಲಿಮಠ, ಬಸವರಾಜ ಮಾರ್ಟಿನಾ, ಸೆಲ್ಡಾನಾ ಸಿಸ್ಟರ್‌ ಕ್ರಿಷ್ಟಿನ್‌ ಮಾತಾಯಿಸ್‌, ವಲಯದ ಸಮನ್ವಯ ಅಧಿಕಾರಿಗಳು ಹಾಗೂ ಶಾಲೆ ಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next