Advertisement
ಕಳೆದ ಒಂದು ವರ್ಷದಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ನಿಂತಿಲ್ಲ, ಜೆಸ್ಕಾಂ ಅಧಿಕಾರಿಗಳಿಗೆ ಕೇಳಿದರು ಲೈನ್ ಟ್ರಿಪ್, ಲೈನ್ ಫಾಲ್ಟ್ , ಜಂಪ್ ಕಟ್ ಆಗಿದೆ, ಲೈನ್ ಕಟ್ಟಾಗಿದೆ ಎಂಬ ಉತ್ತರ ನೀಡುತ್ತಾರೆ. ನಾಗಲಾಪುರ ಪ್ರಸರಣ ಕೇಂದ್ರದಿಂದ ಸಿಂಧನೂರು, ಮಸ್ಕಿ ತಾಲೂಕಿನ ಹಳ್ಳಿಗಳಲ್ಲದೇ ಕೊಪ್ಪಳ ಜಿಲ್ಲೆಯ ಹಳ್ಳಿಗಳಿಗೂ ವಿದ್ಯುತ್ ಒದಗಿಸಲಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಪದೇಪದೆ ವಿದ್ಯುತ್ ಕೈಕೊಡುತ್ತಿದೆ. ಆಯಾ ತಾಲೂಕಿನ ಹಳ್ಳಿಗಳಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಹಿಂದೆ ಎರಡ್ಮೂರು ಬಾರಿ ಪ್ರತಿಭಟನೆಗೆ ಮುಂದಾದಾಗ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿಸಿಲ್ಲ, ಈಗ ಒಂದು ವಾರದಿಂದ ನಿರಂತರ ಜ್ಯೋತಿ ಲೈನ್ ಹಾಗೂ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಇಲ್ಲದೇ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಅಧಿಕಾರಿಗಳು ಬರುವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
Related Articles
Advertisement
ನಾಗಲಾಪುರ 33 ಕೆವಿ ವಿದ್ಯುತ್ ಪ್ರಸರಣ ಕೇಂದ್ರದಿಂದ ಮಸ್ಕಿ ತಾಲೂಕಿನ ಹಳ್ಳಿಗಳಿಗೆ ವಿದ್ಯುತ್ ಪೂರೈಸಲಾಗಿದೆ. ಅಲ್ಲಿನ ಲೈನ್‌ಮನ್‌ಗಳು ಸಮಸ್ಯೆಗಳನ್ನು ಬೇಗ ಪರಿಹರಸದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ.•ಬನ್ನೆಪ್ಪ ಕರಿಬಂಟನಾಳ,
ಜೆಸ್ಕಾಂ ಕಾರ್ಯಪಾಲನಾ ಅಭಿಯಂತರ,
ಲಿಂಗಸುಗೂರ ಉಪವಿಭಾಗ.