Advertisement

ಸಮಾಜದಲ್ಲಿ ಸೌಹಾರ್ದ ಜೀವನ ನಡೆಸಿ

04:00 PM Jan 31, 2020 | Naveen |

ಮುದಗಲ್ಲ: ಪ್ರಸ್ತುತ ದಿನಗಳಲ್ಲಿ ಎಲ್ಲ ಸಮಾಜಗಳಲ್ಲೂ ಒಗ್ಗಟ್ಟು
ಅನಿವಾರ್ಯವಾಗಿದೆ. ಆದರೆ ಒಂದು ಸಮಾಜದ ಒಗ್ಗಟ್ಟಿನಿಂದ ಇನ್ನೊಂದು ಸಮಾಜದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಇತರೆ ಸಮಾಜದವರ ಜತೆ ಪ್ರೀತಿ, ಸಹಕಾರ, ಸೌಹಾರ್ದದಿಂದ ನಡೆದುಕೊಳ್ಳಬೇಕು ಎಂದು ಕುಷ್ಟಗಿ ಶಾಸಕ, ರಡ್ಡಿ ಸಮಾಜದ ಹಿರಿಯ ಮುಖಂಡ ಅಮರೇಗೌಡ ಪಾಟೀಲ ಬಯ್ನಾಪುರ ಹೇಳಿದರು.

Advertisement

ಸಮೀಪದ ಅಡವಿಭಾವಿ ಗ್ರಾಮದಲ್ಲಿ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಡ್ಡಿ ಸಮಾಜದ ಮೇಲೆ ಇತರ ಸಮಾಜದವರು ಸಾಕಷ್ಟು ಅಭಿಮಾನ ಇರಿಸಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ ಎಂದರು.

ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ ಮಾತನಾಡಿ, ಸಣ್ಣ ಗ್ರಾಮ ಅಡವಿಭಾವಿಯಲ್ಲಿ ರಡ್ಡಿ ಸಮಾಜದವರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದ್ದು ಶ್ಲಾಘನೀಯ ಎಂದರು.

ಕಾಂಗ್ರೆಸ್‌ ವಕ್ತಾರ ಶರಣಪ್ಪ ಮೇಟಿ, ಎಪಿಎಂಸಿ ಅಧ್ಯಕ್ಷ ಜಂಬನಗೌಡ ಕಾಚಾಪುರ ಮಾತನಾಡಿದರು. ಅಂಕಲಿಮಠದ ಶ್ರೀ ವೀರಭದ್ರ ಸ್ವಾಮೀಜಿ, ಸಜ್ಜಲಗುಡ್ಡದ ಶ್ರೀ ದೊಡ್ಡಬಸವಾರ್ಯ ತಾತನವರು, ವೇಮೂ. ಅಮರಸ್ವಾಮಿ ಹಿರೇಮಠ, ವೇಮೂ. ಅನ್ನದಾನಯ್ಯಸ್ವಾಮಿ ಹಿರೇಮಠ ನೇತೃತ್ವ ವಹಿಸಿದ್ದರು. ಶಾಸಕ ಡಿ.ಎಸ್‌. ಹೂಲಗೇರಿ ಅಧ್ಯಕ್ಷತೆ ವಹಿಸಿದ್ದರು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ನಾಗನಗೌಡ ತುರಡಗಿ, ಡಾ| ಅಯ್ಯಪ್ಪ ಬನ್ನಿಗೋಳ, ಕಾಚಾಪುರ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ದೇವಿ, ಮಲ್ಲಣ್ಣ ಹಂದ್ರಾಳ, ಶಿವನಗೌಡ ಅಮರಾವತಿ ಸೇರಿದಂತೆ ರಡ್ಡಿ ಸಮಾಜ ಬಾಂಧವರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿವಿಧ ಧಾರ್ಮಿಕ ಕಾರ್ಯಕ್ರಮ: ಹೇಮರಡ್ಡಿ ಮಲ್ಲಮ್ಮ ದೇವಾಲಯ ಉದ್ಘಾಟನೆ ಹಾಗೂ ಮಲ್ಲಮ್ಮಳ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಹೋಮ, ಹವನ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮೆರವಣಿಗೆ ನಡೆಸಲಾಯಿತು. ಬೆಳಗಿನ ಜಾವ ದೇವಾಲಯಕ್ಕೆ ಕಳಸಾರೋಹಣ ನಂತರ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ಡೊಳ್ಳು ವಾದ್ಯದೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ, ಕಳಶದೊಂದಿಗೆ ಸಾಗಿದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next