ಚಿತ್ತಾಪುರ: ತಾಲೂಕಿನ ಮುಡಬೂಳ ಗ್ರಾಮದಲ್ಲಿ ಮನೆಯ ಬಚ್ಚಲು ನೀರು ಚರಂಡಿಗೆ ಬೀಡುವ ವಿಷಯವಾಗಿ ರವಿವಾರ ರಾತ್ರಿ ಸಂಗಾವಿ ಮತ್ತು ಸಣ್ಣೂರಕರ್ ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ನಡೆದ ವಿಶ್ವನಾಥ ಅಣ್ಣಾರಾವ್ ಸಂಗಾವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಪಿಐ ಪ್ರಕಾಶ ಯಾತನೂರ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಸಿದ್ಧಲಿಂಗ ಶರಣಪ್ಪ ಸಂಗಾವಿ ನೀಡಿರುವ ದೂರಿನ ಮೇಲೆ 17ಜನರ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಪೈಕಿ 10 ಆರೋಪಿಗಳಾದ ಶಿವಮುದ್ರಪ್ಪ ರಾಮಣ್ಣ ಸಣ್ಣೂರಕರ್, ಅಭೀಷೇಕ ಶಿವಮುದ್ರಪ್ಪ ಸಣ್ಣೂರಕರ್, ಭಾಗಿನಾಥ ಅಣ್ಣಾರಾವ ಸಣ್ಣೂರಕರ್, ಭದ್ರಪ್ಪ ನಾಗಪ್ಪ ಸಿದ್ರಾಮಗೋಳ, ಅಣ್ಣಪ್ಪ ದೇವಿಂದ್ರಪ್ಪ ಗೋಳೆದ್, ರಾಮು ಶಂಕ್ರಪ್ಪ ಸಣ್ಣೂರಕರ್, ಉಮೇಶ ಶಂಕ್ರಪ್ಪ ಸಣ್ಣೂರಕರ್, ನಾಗರಾಜ ರಾಮಣ್ಣ ಸಣ್ಣೂರಕರ್, ಧನರಾಜ ರಾಮಣ್ಣ ಸಣ್ಣೂರಕರ್, ಬಸವರಾಜ ಉಮೇಶ ಸಣ್ಣೂರಕರ್ ಅವರನ್ನು ವಶಕ್ಕೆ ಪಡೆಯುವ ಮೂಲಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಟಿಪ್ಪರ್ ಬ್ರೇಕ್ ರಿಪೇರಿ ಮಾಡುತ್ತಿದ್ದ ವೇಳೆ ಚಾಲಕನ ಯಡವಟ್ಟು: ಮೆಕ್ಯಾನಿಕ್ ಬಲಿ
ಉಳಿದ ಏಳು ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಶೀಘ್ರದಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದವರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.