Advertisement
ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ಜಿಲ್ಲಾ ಬಿಜೆಪಿ ಘಟಕದ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ಅವಹೇಳನ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಮುಡಾದಲ್ಲಿ 5 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದೆ. ಸಿದ್ದರಾಮಯ್ಯ 14 ನಿವೇಶನ ಮಾಡಿದ್ದರೆ, ಅವರ ಬೆಂಬಲಿಗರಿಗೆ 700 ನಿವೇಶನ ನೀಡಲಾಗಿದೆ. ಸಿದ್ದರಾಮಯ್ಯ, ನಾನು ಒಂದು ಸೈಟನ್ನೂ ಅಕ್ರಮವಾಗಿ ಪಡೆದಿಲ್ಲ ಎನ್ನುತ್ತಾರೆ. ನನ್ನ ಹೆಂಡ್ತಿ ಅರ್ಜಿಯೇ ಕೊಟ್ಟಿಲ್ಲ ಅಂತಾರೆ. ವೈಟ್ನರ್ ಹಾಕಿರುವ ದಾಖಲೆ ಸಿಕ್ಕಿದ್ದು, ವೈಟ್ನರ್ ಏಕೆ ಹಾಕಿದ್ದೀರಾ?. ನನಗೆ ವಿಜಯನಗರದಲ್ಲೇ ಸೈಟು ಎಂದು ಬರೆದಿರುವ ಮೇಲೆಯೇ ವೈಟ್ನರ್ ಹಾಕಿದ್ದಾರೆ. ದಾಖಲೆಗಳನ್ನು ತಿದ್ದುತ್ತಿದ್ದಾರೆ. ನೀವು ಕ್ಲೀನ್ ಸಿದ್ದರಾಮಯ್ಯ ಅಲ್ಲ, ವೈಟ್ನರ್ ಸಿದ್ದರಾಮಯ್ಯ ಎಂದು ದೂರಿದರು.
Related Articles
Advertisement
ಐವಾನ್ ಡಿಸೋಜಾ ಶಾಸಕನಾಗಿರುವುದೇ ನಾಲಾಯಕ್ರಾಜ್ಯಪಾಲರು ದಲಿತರಲ್ಲೇ ಹಿಂದುಳಿದ ವರ್ಗದವರು. ಅಂಥವರನ್ನು ಏಕವಚನದಲ್ಲಿ ಅವಹೇಳನ ಮಾಡುತ್ತೀರಾ. ನಿಮ್ಮನ್ನು ನೇಮಿಸಿದವರು ರಾಜ್ಯಪಾಲರೆಂಬುದು ನೆನಪಿರಲಿ. ಅವರ ಆದೇಶ ಇಲ್ಲದಿದ್ದರೆ ನಿಮ್ಮ ಸರ್ಕಾರದ ಆದೇಶಗಳೇ ನಡೆಯುವುದಿಲ್ಲ. ಐವಾನ್ ಡಿಸೋಜಾ ಎಂಬುವನು ರಾಜಭವನ ಬಾಂಗ್ಲಾದೇಶ ಆಗುತ್ತೆ ಎಂದಿದ್ದಾರೆ. ಕಾಂಗ್ರೆಸ್ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ ಮಾಡಲಾಗಿದೆ. ಅದೇ ಅರ್ಥದಲ್ಲಿ ಹೇಳಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಏನು ಮಾಡಲು ಹೊರಟಿದ್ದೀರಾ? ಶಾಸಕನಾಗಿರುವುದು ನಾಲಾಯಕ್ ಎಂದು ಆರ್.ಅಶೋಕ್ ಕಿಡಿಕಾರಿದರು. ಐವಾನ್ ಡಿಸೋಜಾ ಅವರನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಕಾಂಗ್ರೆಸ್‌ನವರು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಚರ್ಚೆಯಾಗಲಿದೆ. ದಲಿತರಾಗಿರುವ ರಾಜ್ಯಪಾಲರನ್ನು ಅವಮಾನ ಮಾಡಿರುವುದು ಸರಿಯಲ್ಲ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಮುಖಂಡರಾದ ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಡಾ.ಸದಾನಂದ, ಸಿ.ಟಿ.ಮಂಜುನಾಥ್, ನಾಗಾನಂದ, ಶಿವಕುಮಾರ್ ಆರಾಧ್ಯ, ಶಿವಕುಮಾರ್, ಪ್ರಸನ್ನಕುಮಾರ್, ಅಶೋಕ್‌ಕುಮಾರ್ ಇದ್ದರು.