Advertisement

ಅಜ್ಜಾವರ : ಭಾರೀ ಗಾಳಿಗೆ ಕುಸಿದ ಗುಡಿಸಲು

09:50 AM Aug 14, 2019 | Hari Prasad |

ಸುಳ್ಯ: ಇಲ್ಲಿನ ಅಜ್ಜಾವರದ ಮೇನಾಲ ಬಳಿಯ ಕಲ್ಲಗುಡ್ಡೆ ಎಂಬಲ್ಲಿ ಪುರುಷಮ್ಮ ಎಂಬವರಿಗೆ ಸೇರಿದ ಗುಡಿಸಲೊಂದು ಗುರುವಾರ ರಾತ್ರಿ ಕುಸಿದು ಬಿದ್ದಿದೆ.

Advertisement

ತಗಡು ಶೀಟು ಮತ್ತು ಸೋಗೆ ಹುಲ್ಲು ಹೊದಿಸಿದ ಮಾದರಿಯ ಮಣ್ಣಿನ ಗೋಡೆಯ ಗುಡಿಸಲು ಇದಾಗಿದ್ದು ಭಾರೀ ಗಾಳಿಗೆ ಗುಡಿಸಲಿನ ತಗಡು ಶೀಟುಗಳು ಹಾರಿ ಹೋಗಿವೆ. ಇದೀಗ ಗುಡಿಸಲಿನ ಶೀಟುಗಳು ಹಾರಿ ಹೋಗಿರುವುದರಿಂದ ಇಲ್ಲಿ ವಾಸವಾಗಿರುವ ಪುರುಷಮ್ಮ ಅವರಿಗೆ ನೆಲೆ ಇಲ್ಲದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next