Advertisement

ಕೊರೊನಾ ನಿರ್ವಹಣೆಯಲ್ಲಿ ಶಕ್ತಿಮೀರಿ ಪ್ರಯತ್ನ

05:53 PM May 30, 2021 | Team Udayavani |

ಬೆಂಗಳೂರು: “ಕೊರೊನಾ ನಿರ್ವಹಣೆಯಲ್ಲಿರಾಜ್ಯ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದುಇಡೀ ಸಂಪುಟ ಒಂದು ತಂಡವಾಗಿಕಾರ್ಯನಿರ್ವಹಿಸುತ್ತಿದೆ. ನಮಗೆಲ್ಲರಿಗೂ ಈಸಂದರ್ಭ ಪರೀಕ್ಷಾ ಕಾಲವೂ ಹೌದುಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿಸಚಿವ ಗೋಪಾಲಯ್ಯ ಅವರು ಕೊರೊನಾನಿರ್ವಹಣೆ ಕುರಿತು ಹೇಳಿದ ಮಾತುಗಳಿವು.

Advertisement

ಗ್ರಾಮೀಣ ಭಾಗದಲ್ಲಿ ಸೋಂಕುನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳೇನು?

ಗ್ರಾಮೀಣ ಭಾಗದಲ್ಲಿ ಸೋಂಕುನಿಯಂತ್ರಣ ಹಾಗೂ ಹರಡುವಿಕೆತಡೆಗಟ್ಟಲು ಆದ್ಯತೆ ನೀಡಲಾಗಿದೆ. ಅಗತ್ಯಹಾಗೂ ಅವಕಾಶ ಇದ್ದ ಕಡೆ ಕೋವಿಡ್ಕೇರ್ಸೆಂಟರ್ಸ್ಥಾಪಿಸಲಾಗಿದೆ. ನಗರಪ್ರದೇಶಗಳಲ್ಲಿ ಹೋಂ ಐಸೋಲೇಷನ್ಇರುವವರಿಗೆ ಮೆಡಿಕಲ್ಕಿಟ್ನೀಡುವ ಕೆಲಸ ಮಾಡಲಾಗುತ್ತಿದೆ.ಪ್ರತಿ ಹಳ್ಳಿಗೆ ವೈದ್ಯರನ್ನು ಕಳುಹಿಸಿತಪಾಸಣೆಗೂ ಕ್ರಮ ಕೈಗೊಳ್ಳಲಾಗಿದೆ.

ಹಾಸನದಲ್ಲಿ ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ವಿಫಲ ಎಂಬ ಆರೋಪ  ಇದೆಯಲ್ಲ?

ಹಾಗೇನಿಲ್ಲ. ಜಿಲ್ಲಾಡಳಿತ, ಆರೋಗ್ಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿಇದ್ದ ಸಮಸ್ಯೆ ನಿವಾರಿಸಲಾಗಿದೆ. ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚನೆನೀಡಲಾಗಿದೆ.

Advertisement

ಆಕ್ಸಿಜನ್ಹಾಗೂ ವೆಂಟಿಲೇಟರ್ಗಳಕೊರತೆ ಇದೆಯಾ?

ಸದ್ಯಕ್ಕೆ ರೀತಿಯ ಸಮಸ್ಯೆ ಇಲ್ಲ. ಕೊರೊನಾಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರೋಗ್ಯ ಸಚಿವಡಾ.ಕೆ.ಸುಧಾಕರ್ಅವರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ವಿದ್ದ 40 ವೆಂಟಿಲೇಟರ್ಹಾಗೂ25 ಆಮ್ಲಜನಕ ಸಾಂದ್ರಕ ಪೂರೈಕೆಗೆ ಕ್ರಮಕೈಗೊಂಡಿದ್ದಾರೆ.

 ಕಳೆದ 10 ದಿನಗಳಿಂದಚುಚ್ಚುಮದ್ದು ಕೊರತೆಯೂ ಇಲ್ಲ ನಾನೂ ಸಹರಾಜ್ಯದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದುಜಿಲ್ಲೆಗೆ ಅಗತ್ಯವಾದ ನೆರವು ಪಡೆಯುತ್ತಿದ್ದೇನೆ.„ಔಷಧ ಪರಿಕರಗಳ ಖರೀದಿಗೆ ಆರ್ಥಿಕಮುಗ್ಗಟ್ಟು ಇದೆಯೇ?ಇಲ್ಲ, ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ10 ಕೋಟಿ ರೂ. ನೀಡಲಾಗಿತ್ತು. ಬೇಡಿಕೆಆಧಾರದ ಮೇಲೆ ಮತ್ತೆ 10 ಕೋಟಿ ರೂ.ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ.ಹೀಗಾಗಿ, ಹಣಕಾಸಿನ ಸಮಸ್ಯೆ ಇಲ್ಲ.

ಜನಪ್ರತಿನಿಧಿಗಳ ಜತೆ ಸಭೆ ನಿರಂತರವಾಗಿ ನಡೆಸಿದ್ದೀರಾ?

ವಾರದಲ್ಲಿ ಮೂರು ದಿನ ಹಾಸನ ಜಿಲ್ಲೆ ಪ್ರವಾಸಮಾಡಿದ್ದೇನೆ. ಪ್ರತಿ ತಾಲೂಕಿನಲ್ಲಿಯೂಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಆಲಿಸಿ ತತ್ಕ್ಷಣಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇನೆ. ಮುಖ್ಯಕಾರ್ಯದರ್ಶಿಗಳೂ ಸಹ ಸಭೆ ನಡೆಸಿ ಸಲಹೆಸೂಚನೆ ನೀಡಿದ್ದಾರೆ.

ಅಬಕಾರಿ ಇಲಾಖೆಯ ಆದಾಯ ಹೇಗಿದೆ?

ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ವಾರದಲ್ಲಿಐದು, ನಾಲ್ಕು ದಿನ ಲಾಕ್ಡೌನ್ಘೋಷಿಸಲಾಗಿದೆ. ಬೆಳಗ್ಗೆ 10 ಗಂಟೆವರೆಗೆ ಮಾತ್ರಮಾರಾಟಕ್ಕೆ ಅವಕಾಶ ಇರುವುದರಿಂದ ಬಹುತೇಕಕಡೆ ಶೇ.50ರಷ್ಟು ವಹಿವಾಟು, ಕೆಲವು ಕಡೆ ಮಾತ್ರಶೆ.90ರಷ್ಟು ವಹಿವಾಟು ನಡೆಯುತ್ತಿದೆ. ಆದರೆ,ನಾವು ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.ಕೊರೊನಾ ನಿಯಂತ್ರಣ ಈಗಿನ ನಮ್ಮ ಆದ್ಯತೆ.

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next