ದೇವನಹಳ್ಳಿ: ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಜನಪರ ರೈತರಿಗೆ ಉಪಯೋಗವಾಗುವ ಕಾಯ್ದೆಗಳಾಗಿದೆ. ರೈತರ ಪ್ರತಿಭಟನೆ ರಾಜಕೀಯ ಲೇಪವಾಗಿದೆ ಎಂದು ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಬೆಂಗಳೂರಿನ ಗರುಡಾಚಾರ್ ಪಾಳ್ಯದ ಅವರ ನಿವಾಸದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಅನ್ನದಾತರ ಕಲ್ಯಾಣಕ್ಕೆ ನರೇಂದ್ರ ಮೋದಿ ಸರ್ಕಾರ ಸಮರ್ಪಿತ ಅನ್ನುವ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಜಾಗೃತಿ ಮೂಡಿಸಿ: ಮಧ್ಯವರ್ತಿಗಳ ಹಾವಳಿ ತಪ್ಪಿಸುವ, ರೈತರಿಗೆ ಅನುಕೂಲವಾಗುವ ಕಾಯ್ದೆ ಸರ್ಕಾರ ತಂದಿದೆ. ರೈತ ಮೋರ್ಚಾ ಪದಾಧಿಕಾರಿಗಳು ರೈತರಿಗೆ ಕೃಷಿ ಕಾಯ್ದೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸಬೇಕು. ಸಾಧಕ-ಬಾಧಕ ಹೇಳಬೇಕು. ಈ ಕಾಯ್ದೆ ರೈತಪರ ಯೋಜನೆಗಳಾಗಿವೆ. ಸಿಎಂ ಯಡಿಯೂರಪ್ಪ ಸರ್ಕಾರ ಜನಪರ, ರೈತರ ಕಾರ್ಯಕ್ರಮ ರೂಪಿಸಿದ್ದಾರೆಂದರು.
ವ್ಯಾಪಾರ ಮಾಡಲು ಅನುಕೂಲ: ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎಚ್.ಎಂ. ರವಿಕುಮಾರ್ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರ ಕೃಷಿ ಮಸೂದೆ ತಂದಿರುವುದು ರೈತರಿಗೆ ಅನುಕೂಲವಂತಾಗಿದೆ. ಎಪಿಎಂಸಿ ಕಾಯ್ದೆಯಿಂದ ರೈತರು ನೇರವಾಗಿ ವ್ಯಾಪಾರ ಮಾಡಲು ಅನುಕೂಲವಾಗಿದೆ. ದಲ್ಲಾಳಿ ತಪ್ಪಿಸಲು ಇದೊಂದು ಉತ್ತಮ ಕಾನೂನು. ಅನ್ನದಾತರ ಕಲ್ಯಾಣಕ್ಕೆ ನರೇಂದ್ರ ಮೋದಿ ಸರ್ಕಾರ ಸಮರ್ಪಿತ ಪುಸ್ತಕದಲ್ಲಿ ರೈತರಲ್ಲಿ ಅರಿವೂ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆಂದರು.
ಇದನ್ನೂ ಓದಿ :ಸಂಯುಕ್ತಾ ಪಾಟೀಲ ಗೆಲುವಿಗೆ ಸಂಭ್ರಮಾಚರಣೆ
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಪುರುಷೋತ್ತಮ್ ಗೌಡ, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ಶ್ರೀನಿವಾಸ್, ಹೊಸಕೋಟೆ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಮಾರುತಿ ರಮೇಶ್, ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಮುಖೇಶ್, ಮುಖಂಡ ಪ್ರವೀಣ್ ಸೋಮಶೇಖರ್ ಇದ್ದರು.