ಅಹಮದಾಬಾದ್: ಮಳೆ ಬಾಧಿತ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆದ್ದು ಬೀಗಿದೆ. ಕೊನೆಯವರೆಗೂ ಹೋರಾಟ ನಡೆಸಿದ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಎಸೆತದಲ್ಲಿ ಸೋಲನುಭವಿಸಿತು. ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಐದನೇ ಐಪಿಎಲ್ ಕಪ್ ಮುಡಿಗೇರಿಸಿಕೊಂಡರು.
ಈ ವರ್ಷದ ಐಪಿಎಲ್ ನ ಅತ್ಯಂತ ಚರ್ಚಿತ ವಿಷಯವೆಂದರೆ ಅದು ಧೋನಿ ನಿವೃತ್ತಿ. ಈ ಬಾರಿ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಅನುಮಾನ ಅಭಿಮಾನಿಗಳಿಗಿತ್ತು. ಈ ಬಗ್ಗೆ ಧೋನಿ ಫೈನಲ್ ಪಂದ್ಯದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ನಿವೃತ್ತಿ ಘೋಷಣೆ ಮಾಡುವುದು ಸುಲಭದ ವಿಚಾರ. ಆದರೆ ಮುಂದಿನ ಒಂಬತ್ತು ತಿಂಗಳು ಅಭ್ಯಾಸ ನಡೆಸಿ ಮುಂದಿನ ಸೀಸನ್ ಆಡಿ ಅಭಿಮಾನಿಗಳಿಗೆ ಗಿಫ್ಟ್ ಕೊಡುವುದಾಗಿ ಧೋನಿ ಹೇಳಿದ್ದಾರೆ.
ಸಾಂಧರ್ಭಿಕವಾಗಿ ಇದು ನಿವೃತ್ತಿ ಘೋಷಣೆ ಮಾಡಲು ಸೂಕ್ತ ಸಮಯ. ಆದರೆ ಈ ಬಾರಿ ನಾನು ಹೋದಲ್ಲೆಲ್ಲಾ ಜನರು ತೋರಿದ ಅಭಿಮಾನ ನೋಡಿದರೆ, ‘ಥ್ಯಾಂಕ್ಯೂ ಸೋ ಮಚ್’ ಎಂದು ಹೇಳುವುದು ಕಷ್ಟದ ವಿಷಯವಿಲ್ಲ. ಆದರೆ ಮುಂದಿನ ಒಂಬತ್ತು ತಿಂಗಳು ಅಭ್ಯಾಸ ನಡೆಸಿ ಕನಿಷ್ಠ ಒಂದು ಸೀಸನ್ ಆದರೂ ಆಡಬಯಸುತ್ತೇನೆ. ಆದರೆ ಎಲ್ಲವೂ ದೇಹದ ಮೇಲೆ ಅವಲಂಬಿತ. ಈ ಬಗ್ಗೆ ನಿರ್ಧರಿಸಲು 6-7 ತಿಂಗಳು ಸಮಯವಿದೆ. ಇದು ನನ್ನ ಕಡೆಯಿಂದ ಗಿಫ್ಟ್ ರೀತಿ. ಇದು ನನಗೆ ಸುಲಭವಲ್ಲ, ಆದರೆ ಜನರು ತೋರಿದ ಪ್ರೀತಿ ನೋಡಿದರೆ ನಾನು ಅದನ್ನು ಮಾಡಲೇ ಬೇಕಿದೆ ( ಆಟ ಮುಂದುವರಿಕೆ)” ಎಂದು ಪಂದ್ಯದ ನಂತರ ಧೋನಿ ಹೇಳಿದರು.
Related Articles
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 214 ರನ್ ಗಳಿಸಿತು. ಆದರೆ ನಂತರ ಮಳೆ ಬಂದ ಕಾರಣ ಚೆನ್ನೈಗೆ 15 ಓವರ್ ಗಳಲ್ಲಿ 171 ರನ್ ಗುರಿ ನೀಡಲಾಯಿತು. ಸಿಎಸ್ ಕೆ ತಂಡ ಐದು ವಿಕೆಟ್ ನಷ್ಟಕ್ಕೆ ಕೊನೆಯ ಎಸೆತದಲ್ಲಿ ಗುರಿ ತಲುಪಿ ಕಪ್ ಗೆದ್ದುಕೊಂಡಿತು.