Advertisement

CSK: ಧೋನಿ ಯಾಕೆ ಬ್ಯಾಟಿಂಗ್ ಗೆ ಇಳಿಯುತ್ತಿಲ್ಲ..: ಕಾರಣ ತಿಳಿಸಿದ ಕೋಚ್ ಹಸ್ಸಿ

12:37 PM Mar 27, 2024 | Team Udayavani |

ಚೆನ್ನೈ: 17ನೇ ಸೀಸನ್ ನ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಸಿಎಸ್ ಕೆ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಗೆದ್ದ ರುತುರಾಜ್ ಬಳಗ, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದೆ.

Advertisement

ಎರಡು ಪಂದ್ಯ ನಡೆದರೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಒಂದರಲ್ಲಿಯೂ ಬ್ಯಾಟಿಂಗ್ ಗೆ ಇಳಿದಿಲ್ಲ. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಧೋನಿಗಿಂತ ಮೊದಲು ಬ್ಯಾಟಿಂಗ್ ಗೆ ಇಳಿದರೆ, ಟೈಟಾನ್ಸ್ ಪಂದ್ಯದಲ್ಲಿ ಯುವ ಆಟಗಾರ ಸಮೀರ್ ರಿಜ್ವಿ ಅವರು ಕ್ಯಾಮಿಯೋ ಆಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಸ್ ಕೆ ಬ್ಯಾಟಿಂಗ್ ಕೋಚ್ ಹಸ್ಸಿ, ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ದೇಶನದಲ್ಲಿ ಬ್ಯಾಟರ್‌ ಕ್ರಮಾಂಕ ಬದಲಾಗುತ್ತಿದೆ ಎಂದು ಹೇಳಿದರು.

“ಇದು ಖಂಡಿತವಾಗಿಯೂ ಫ್ಲೆಮಿಂಗ್ ಅವರ ನಿರ್ದೇಶನವಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬರುತ್ತಿದ್ದಂತೆ, ನಾವು ಹೆಚ್ಚುವರಿ ಬ್ಯಾಟರ್ ಮತ್ತು ಬೌಲರ್ ಪಡೆದುಕೊಂಡಿದ್ದೇವೆ. ಆದ್ದರಿಂದ ಬ್ಯಾಟಿಂಗ್ ಕ್ರಮಾಂಕವು ಉದ್ದವಾಗುತ್ತಲೇ ಇದೆ. ಎಂಟನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಇದ್ದಾರೆ ಎಂದು ನಾನು ಭಾವಿಸುತ್ತೇನೆ, ಧೋನಿ ಈ ಸಮಯದಲ್ಲಿ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ” ಎಂದು ಹಸ್ಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next