Advertisement

ಅಭ್ಯಾಸದ 100 ಮೀ. ಓಟ: ಪಾಂಡ್ಯ ಹಿಂದಿಕ್ಕಿದ ಧೋನಿ

01:09 PM Dec 14, 2017 | |

ನವದೆಹಲಿ: ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ಎಂ.ಎಸ್‌.ಧೋನಿ ಒಂಟಿ ರನ್‌ಗಾಗಿ ಮಿಂಚಿನ ಓಟ ಓಡುವುದನ್ನು ನೋಡಿದ್ದೇವೆ. ಅಷ್ಟೊಂದು ಚುರುಕಾಗಿ ಸಿಂಗಲ್ಸ್‌, ಡಬಲ್ಸ್‌ ರನ್‌ ಕದಿಯುವುದು ಧೋನಿಗೆ ಮಾತ್ರ ಸಾಧ್ಯ.  ಭಾರತ ತಂಡದಲ್ಲಿ ಯಾರೂ ಇಲ್ಲ ಎನ್ನುವುದು ಈಗ ಮತ್ತೂಮ್ಮೆ ಸಾಬೀತಾಗಿದೆ.

Advertisement

ಹೌದು, ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ಮುನ್ನ ಅಭ್ಯಾಸ ಸಮಯದಲ್ಲಿ ಧೋನಿ ಮತ್ತು ಹಾರ್ದಿಕ್‌ ಪಾಂಡ್ಯ ನಡುವೆ 100 ಮೀ. ಓಟದ ಸ್ಪರ್ಧೆ ಏರ್ಪಟ್ಟಿದೆ. ಧೋನಿಗಿಂತ 12 ವರ್ಷ ಸಣ್ಣವರಾಗಿರುವ ಪಾಂಡ್ಯ ಹಿರಿಯ ಆಟಗಾರನಿಗೆ ಸವಾಲು ನೀಡಲು ವಿಫ‌ಲವಾದರು. ಓಡುವ ಸಂದರ್ಭದಲ್ಲಿ ಧೋನಿ ಮುಂದಿದ್ದಾಗ ಪಾಂಡ್ಯ ಓಡುತ್ತಲೇ ಧೋನಿಯನ್ನು ನೋಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next