Advertisement
ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಗ್ರಾಮದ ಸ್ವರ್ಣ ಗೌರಿದೇವಿಯ ಮೂರ್ತಿಯನ್ನು ಮೂಲ ಸನ್ನಿಧಿ ಬಾವಿಮನೆಯಿಂದ ಪ್ರತಿವರ್ಷದಂತೆ ಗೌರಿ ಹಬ್ಬದ ದಿನವಾದ ಬುಧವಾರ ಪೂಜಾ ಕೈಂಕರ್ಯ ನೆರವೇರಿಸಿ, ನಂತರ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಹೆಬ್ಟಾಗಿಲ್ಲಿರುವ ಶ್ರೀ ಬಸವೇಶ್ವರ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು.
Related Articles
Advertisement
ಬಸವೇಶ್ವರ ದೇವಾಲಯದಿಂದ ಹುಳಿಯಾರ್ ರಸ್ತೆ ಯವರೆಗೂ ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ತಮ್ಮ ಹರಕೆ, ಕಾಣಿಕೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು. ನೂರಾರು ಭಕ್ತರು ದೇವಾಲಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಅಗ್ನಿ ಕುಂಡದಲ್ಲಿ ಅಪಾರ ಪ್ರಮಾಣದ ಕರ್ಪೂರ ಸಮರ್ಪಿಸಿ, ಗುಗ್ಗಳ ಸೇವೆ ಸಲ್ಲಿಸಿದರು. ಶ್ರೀದೇವಿಗೆ ಪ್ರಿಯವಾದ ಮಡಿಲಅಕ್ಕಿಯನ್ನು ಸೀರೆಗಳ ಕುಪ್ಪಸಗಳನ್ನು ನೀಡಿ ಮಹಿಳೆಯರು ತಮ್ಮ ಹರಕೆ ತೀರಿಸಿದರು. ಇನ್ನೂ 9 ದಿನಗಳ ಕಾಲ ಗ್ರಾಮದಲ್ಲಿ ಶ್ರೀದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಮಾಡಾಳು ಗ್ರಾಮಕ್ಕೆ ಬರುತ್ತಾರೆ.