Advertisement
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುನೀರ್ ಮಾತನಾಡಿ, ಜೋಕಟ್ಟೆ ಭಾಗದಲ್ಲಿ ಮಾಲಿನ್ಯದಿಂದ ತಿನ್ನುವ ಅನ್ನದಿಂದ ಹಿಡಿದು ಕುಡಿಯುವ ನೀರಿನವರೆಗೆ ಮುಟ್ಟದಂತಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡದೆ ಸತಾಯಿಸಲಾಗುತ್ತಿದೆ. ವಿಷಾನಿಲ ಸೇವನೆಯಿಂದ ಆರೋಗ್ಯ ಸ್ಥಿತಿ ಹದಗೆಡುತ್ತಿದೆ, ಇದರ ನಡುವೆ ಕೃಷಿಕರಿಗೆ ಸರಿಯಾದ ಮಾಹಿತಿ ನೀಡದೆ ಮತ್ತೆ ಭೂ ಕಬಳಿಕೆ ಮಾಡಲು ಸಂಸ್ಥೆ ಹೊರಟಿರುವುದು ಸರಿಯಲ್ಲ ಎಂದರು.
ಮೊದಲು ಜೋಕಟ್ಟೆ, ಕಳವಾರು ಪ್ರದೇಶದ ಜನತೆಯ ಸಮಸ್ಯೆ ಬಗೆ ಹರಿಸಲು ಸರಕಾರ ನೀಡಿರುವ ಆದೇಶವನ್ನು ಜಾರಿಗೆ ತರಲಿ. ಅಲ್ಲಿಯವರೆಗೂ ಬೇರೆ ಭೂ ಸ್ವಾಧೀನಕ್ಕೆ ಸಮಿತಿ ಅವಕಾಶ ನೀಡುವುದಿಲ್ಲ ನಿರಂತರ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಹೋರಾಟ ಸಮಿತಿ ಮುಖಂಡರಾದ ಇಮ್ತಿಯಾಝ್, ಅಬೂಬಕರ್ ಬಾವಾ, ಸುಲೋಚನಾ, ಶೇಖರ್, ಭವಾನಿ, ಯಮುನಕ್ಕಾ, ಆಮಿನಮ್ಮ, ಅಜ್ಮಲ್ ಅಹ್ಮದ್, ಶ್ರೀನಾಥ್ ಕುಲಾಲ್, ಎಂ.ಡಿ. ಇಸ್ಮಾಯಿಲ್, ಇಕ್ಬಾಲ್ ಮತ್ತಿತರರು
ಪಾಲ್ಗೊಂಡಿದ್ದರು.