ಮಂಗಳೂರು: ಎಂ.ಆರ್.ಪಿ.ಎಲ್. 3ನೇ ಹಂತದಲ್ಲಿ ಹಸುರು ವಲಯ ನಿರ್ಮಾಣಕ್ಕೆ ಜೋಕಟ್ಟೆ ಗ್ರಾಮದ 27 ಎಕ್ರೆ ಭೂಸ್ವಾ ಧೀನಗೊಳ್ಳುವ ನಿರ್ವಸಿತರಿಗೆ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಎಂ.ಆರ್.ಪಿ.ಎಲ್. ಹಸುರು ವಲಯ ಭೂಸ್ವಾ ಧೀನಕ್ಕೆ ಸಂಬಂಧಿ ಸಿ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
3ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣ ಭೂಸ್ವಾಧೀನಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸಲು ಈಗಾಗಲೇ ಕೆ.ಪಿ.ಟಿ. ಪಾಲಿಟೆಕ್ನಿಕ್ ಸಂಸ್ಥೆಗೆ ವಹಿಸಲಾಗಿದ್ದು, ಮೂರು ತಿಂಗಳಲ್ಲಿ ಸಮೀಕ್ಷೆ ಬರಲಿದೆ. ಅದಕ್ಕೂ ಮುನ್ನ ನಿರ್ವಸಿತರಿಗೆ ಒಪ್ಪಿಗೆಯಾಗುವ ಪ್ಯಾಕೇಜ್ ಅನ್ನು ನಿರ್ಧರಿಸುವಂತೆ ಸಚಿವರು ಎಂ.ಆರ್.ಪಿ.ಎಲ್. ಅಧಿಕಾರಿಗಳಿಗೆ ಸಲಹೆ ಮಾಡಿದರು.
ಹಸಿರು ವಲಯ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ನಡೆಸಬೇಕು. ಅಲ್ಲಿರುವ ಮನೆ, ಜಮೀನುಗಳ ಬಗ್ಗೆ ನಿಖರವಾಗಿ ವರದಿ ತಯಾರಿಸಬೇಕು. ಶೀಘ್ರದಲ್ಲೇ ಪುನರ್ವಸತಿ ಪ್ಯಾಕೇಜ್ ನಿರ್ಧರಿಸುವಂತೆ ಸೂಚಿಸಿದ ಸಚಿವರು, ಭೂಸ್ವಾ ಧೀನಗೊಳ್ಳುವ ಸ್ಥಳಕ್ಕೆ ತಾನು ಶೀಘ್ರದಲ್ಲೇ ಭೇಟಿ ನೀಡುವುದಾಗಿ ತಿಳಿಸಿದರು. ಎರಡು ತಿಂಗಳ ಬಳಿಕ ಈ ವಿಷಯದಲ್ಲಿ ಮತ್ತೆ ಸಭೆ ನಡೆಸುವುದಾಗಿ ಹೇಳಿದರು.
ಎಂ.ಆರ್.ಪಿ.ಎಲ್. ಅಧಿಕಾರಿಗಳು ಮಾತನಾಡಿ, ಹಸುರು ವಲಯ ಭೂಸ್ವಾ ಧೀನಕ್ಕೆ ಸಮೀಕ್ಷಾ ವರದಿ ಹಾಗೂ ಗ್ರಾಮಸ್ಥರೆಲ್ಲರ ಒಪ್ಪಿಗೆ ಅಗತ್ಯವಿದೆ. ಪರಿಹಾರ ಪ್ಯಾಕೇಜ್ ಅನ್ನು ಬೋರ್ಡ್ ಸಭೆಯಲ್ಲಿಟ್ಟು ಶೀಘ್ರವಾಗಿ ನಿರ್ಧರಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಕೈಗಾರಿಕೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಕೆಐಎಡಿಬಿ ವಿಶೇಷ ಭೂಸ್ವಾ ಧೀನಾ ಧಿಕಾರಿ ರಾಜು, ಎಂ.ಆರ್.ಪಿ.ಎಲ್. ಅ ಧಿಕಾರಿಗಳು, ಮುನೀರ್ ಕಾಟಿಪಳ್ಳ, ತಾ.ಪಂ.ಮಾಜಿ ಸದಸ್ಯ ಬಶೀರ್, ಜೋಕಟ್ಟೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.