ಹೊಸದಿಲ್ಲಿ: ಡೋಪ್ ಟೆಸ್ಟ್ನಲ್ಲಿ ಅನುತ್ತೀರ್ಣರಾಗಿ ನಾಡಾದಿಂದ 3 ತಿಂಗಳ ನಿಷೇಧಕ್ಕೊಳಗಾಗಿರುವ ಓಟಗಾರ್ತಿ ಎಂ.ಆರ್. ಪೂವಮ್ಮ ಅವರಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಹಿನ್ನಡೆಯಾಗಿದೆ.
Advertisement
ಈ ಪಂದ್ಯಾವಳಿ ಅಮೆರಿಕದ ಯೂಜಿನ್ನಲ್ಲಿ ಇದೇ ತಿಂಗಳ 15ರಂದು ಆರಂಭವಾಗಲಿದೆ. ಇಲ್ಲಿ ಪೂವಮ್ಮ ಅವರಿಗೆ ವಿಶ್ವ ರ್ಯಾಂಕಿಂಗ್ ಕೋಟಾದಡಿ ಆಯ್ಕೆಯಾಗುವ ಅವಕಾಶವಿತ್ತು.
2021ರಲ್ಲಿ ಪಾಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ಪ್ರಿ ಕ್ರೀಡಾ ಕೂಟದ ವೇಳೆ ಪೂವಮ್ಮ ಉದ್ದೀಪನ ಸೇವನೆ ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ನಿಷೇಧಿತ ಪದಾರ್ಥ ಸೇವಿಸಿದ್ದು ಪತ್ತೆಯಾಗಿದೆ.