Advertisement

ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಸಂಸದರ ಸೇಡು: ರಾಠೊಡ

07:09 PM Sep 23, 2022 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ನಡೆದ ಪೋಕೊÕà ಪ್ರಕರಣ ತಲೆ ತಗ್ಗಿಸುವಂತಹದಾಗಿದೆ. ಆದರೆ ಕಲಬುರಗಿ ಸಂಸದ ಡಾ| ಉಮೇಶ ಜಾಧವ ರಾಜಕೀಯವಾಗಿ ಬಳಸಿಕೊಂಡು ಸೇಡಿನ ಮತ್ತು ದ್ವೇಷದಿಂದ ಕಾಂಗ್ರೆಸ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಅವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕುಂಚಾವರಂ ಶಾಲೆಯೊಂದರಲ್ಲಿ ಘಟನೆ ಬಗ್ಗೆ ನಿಷ್ಟಕ್ಷಪಾತವಾಗಿ ತನಿಖೆ ನಡೆಯಲಿ. ಆದರೆ ಸಂಸದರು ಕಾಳಗಿ, ಮಿರಿಯಾಣ, ಚಿಂಚೋಳಿ, ಕುಂಚಾವರಂ, ರಟಕಲ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್‌ ಕಾರ್ಯಕರ್ತರನ್ನು ತೊಂದರೆ ಕೊಡುತ್ತಿದ್ದಾರೆ. ಸೇಡಿನ ಮತ್ತು ದ್ವೇಷದ ರಾಜಕಾರಣ ಚಿಂಚೋಳಿ ಮತಕ್ಷೇತ್ರದಲ್ಲಿ ಯಾವ ರಾಜಕಾರಣಿಗಳು ಮಾಡಿಲ್ಲ. ಕುಂಚಾವರಂ ಪೋಸ್ಕೋ ಘಟನೆ ಸೆ.12ರಂದು ನಡೆದಿದೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಸೆ.15ರಂದು ಉದ್ದೇಶಪೂರ್ವಕ ಬಿಜೆಪಿ ವಕ್ತಾರನಿಂದ ಕೊಡಿಸಿದ್ದಾರೆ. ಇದೊಂದು ಷಡ್ಯಂತ ಮತ್ತು ಕುತಂತ್ರದಿಂದ ಕೂಡಿದೆ ಎಂದರು.

ತಾಲೂಕಿನ ಪವಿತ್ರ ಧಾರ್ಮಿಕ ಕ್ಷೇತ್ರ ರಟಕಲ್‌ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರಾಜಕೀಯ ಬೆರೆಸಿ ಪಾವಿತ್ಯತೆ ಹಾಳು ಮಾಡಿದ್ದಾರೆ. ಚಿಂಚೋಳಿ ಮತಕ್ಷೇತ್ರ ಭ್ರಷ್ಟಾಚಾರ ಕಣಜವಾಗಿ ಮಾರ್ಪಟ್ಟಿದೆ. ಅಧಿಕಾರಿಗಳು ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಡಿ ಎಂದು ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ತಿಳಿಸಿದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಮಲಿ, ಶರಣು ಮೋತಕಪಳ್ಳಿ, ಗೋಪಾಲರಾವ ಕಟ್ಟಿಮನಿ, ಚಿತ್ರಶೇಖರ ಪಾಟೀಲ, ಅನವರ ಖತೀಬ, ಸುರೇಶ ಬಂಟಾ, ನರಸಿಂಹಲು ಕುಂಬಾರ, ಚಿರಂಜೀವಿ ಶಿವರಾಮಪುರ, ನರಸಿಂಹಲು ಸವಾರಿ, ನಾಗೇಶ ಗುಣಾಜಿ, ಶಬ್ಬೀರ ಅಹೆಮದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next