Advertisement

ಮಂಗಳೂರು ಅಭಿವೃದ್ಧಿಯಲ್ಲಿ ಸಂಸದರ ನಿರ್ಲಕ್ಷ್ಯ: ಎಸ್‌ಡಿಪಿಐ

12:06 AM Apr 09, 2019 | Sriram |

ಮಹಾನಗರ: ಜಾಗತಿಕವಾಗಿ ಹೆಸರುವಾಸಿಯಾದ ಮಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಡ್ರೈನೇಜ್‌ ಸಮಸ್ಯೆ ದೊಡ್ಡ ಮಟ್ಟದಲ್ಲಿ ಮುಂದು ವರಿದಿದೆ. ಗುಣಮಟ್ಟದ ರಸ್ತೆ, ಬಸ್‌ ನಿಲ್ದಾಣ ವ್ಯವಸ್ಥೆಯನ್ನು ಮಾಡಲು ಸಂಸದರಿಗೆ ಸಾಧ್ಯವಾಗಿಲ್ಲ ಎಂದು ಎಸ್‌ಡಿಪಿಐ ಪಕ್ಷದ ದ.ಕ. ಲೋಕಸಭಾ ಅಭ್ಯರ್ಥಿ ಮಹಮ್ಮದ್‌ ಇಲಿಯಾಸ್‌ ತುಂಬೆ ಅವರು ತಿಳಿಸಿದ್ದಾರೆ.

Advertisement

ನಗರದ ಸೆಂಟ್ರಲ್‌ ಮಾರುಕಟ್ಟೆ, ಸ್ಟೇಟ್‌ ಬ್ಯಾಂಕ್‌, ಬಂದರು, ಕುದ್ರೋಳಿ ಸುತ್ತ ಮುತ್ತ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು.

ಸೆಂಟ್ರಲ್‌ ಮಾರುಕಟ್ಟೆ ಮತ್ತು ಕೇಂದ್ರ ಬಸ್‌ ನಿಲ್ದಾಣ ತುರ್ತಾಗಿ ಆಧುನೀ ಕರಣಗೊಳ್ಳಬೇಕಾಗಿದೆ. ಕಂದಕ್‌, ಬಂದರು ಮತ್ತು ಕುದ್ರೋಳಿ ಪ್ರದೇಶಗಳಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಎಸ್‌ಡಿಪಿಐ ಪಕ್ಷದ ಸಂಸದರಾಗಿ ಜನರು ಆಯ್ಕೆ ಮಾಡಿದರೆ ನಗರವನ್ನು ತುರ್ತಾಗಿ ಅಭಿವೃದ್ಧಿಗೊಳಿಸಲು ತಾನು ಬದ್ಧ, ಹಳೆ ಬಂದರಿನ ಮೀನುಗಾರಿಕೆ ಜೆಟ್ಟಿ ಸಮಸ್ಯೆ ಪರಿಹರಿಸಬೇಕಾಗಿದೆ ಎಂದು ಅವರು ಹೇಳಿದರು.

ಎಸ್‌ಡಿಪಿಐ ಮುಖಂಡರಾದ ಜಲೀಲ್‌ ಕೆ., ಅಕ್ರಮ್‌ ಹಸನ್‌, ಅಥಾವುಲ್ಲಾ ಜೋಕಟ್ಟೆ, ಅಶ್ರಫ್‌ ಮಂಚಿ, ಸುಹೇಲ್‌ಖಾನ್‌, ಹಾರಿಸ್‌ ಮಲಾರ್‌, ಮುಝೈರ್‌ ಕುದ್ರೋಳಿ, ಚುನಾವಣ ಮುಖ್ಯಉಸ್ತುವಾರಿ ಅಬ್ದುಲ್‌ ಹನ್ನಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next