ಹೊಸದಿಲ್ಲಿ : ಅಮೆರಿಕದ ನ್ಯೂಜೆರ್ಸಿಯಲ್ಲಿ ನಿನ್ನೆ ಗುರುವಾರ, ಸ್ವತಃ ಟೆಕ್ಕಿಯಾಗಿರುವ, ಭಾರತೀಯ ಟೆಕ್ಕಿಯ ಪತ್ನಿ, 40ರ ಹರೆಯದ ಎನ್ ಶಶಿಕಲಾ ಹಾಗೂ ಆಕೆಯ ಏಳು ವರ್ಷ ಪ್ರಾಯದ ಪುತ್ರ ಅನೀಶ್ ಸಾಯಿ ಎಂಬಾತನನ್ನು ಕುತ್ತಿಗೆ ಬಿಗಿದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ಶಶಿಕಲಾ ಅವರ ಪತಿ ಎನ್ ಹನುಮಂತ ರಾವ್ ಅವರು ನಿನ್ನೆ ರಾತ್ರಿ ಮನೆಗೆ ಮರಳಿದಾಗ ಪತ್ನಿ ಹಾಗೂ ಪುತ್ರ ಕೊಲೆಗೀಡಾಗಿದ್ದುದನ್ನು ಕಂಡು ದಿಗಿಲುಗೊಂಡರು. ಈ ದಂಪತಿ ಕಳೆದ 9 ವರ್ಷಗಳಿಂದ ಅಮೆರಿಕರದಲ್ಲಿ ನೆಲೆಸಿದೆ.
ಶಶಿಕಲಾ ಹಾಗೂ ಅನೀಶ್ ಅವರ ಕೊಲೆಗೆ ಸಂಬಂಧಿಸಿ ಭಾರತೀಯ ಸಂಸತ್ತಿನ ಉಭಯ ಸದನಗಳ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿ, ಅಮೆರಿಕದಲ್ಲಿ ಭಾರತೀಯರ ಹತ್ಯೆ ಮುಂದುವರಿದಿರುವ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿಂದು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಟಿ ಸುಬ್ಬರಾಮಿ ರೆಡ್ಡಿ ಅವರು ಈ ವಿಷಯವನ್ನು ಎತ್ತಿ ಅಮೆರಿದಲ್ಲಿ ನಿನ್ನೆ ಗುರುವಾರ ರಾತ್ರಿ ಭಾರತೀಯ ಮಹಿಳೆ ಹಾಗೂ ಆಕೆಯ ಪುತ್ರನ ಕೊಲೆ ನಡೆದಿರುವ ವಿಷಯವನ್ನು ಎತ್ತಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಡೆಪುrಟಿ ಸ್ಪೀಕರ್ ಪಿ ಜೆ ಕುರಿಯನ್ ಅವರು ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಸರಕಾರ ಈ ವಿಷಯವನ್ನು ಅಮೆರಿಕದಲ್ಲಿ ಉನ್ನತ ಮಟ್ಟದಲ್ಲಿ ಎತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಮೆರಿಕದಲ್ಲಿ ಈಚೆಗಷ್ಟೇ ಇಬ್ಬರು ಭಾರತೀಯರ ಹತ್ಯೆ ನಡೆದಿದ್ದು ಇದೀಗ ಮತ್ತೆ ಎರಡು ಕೊಲೆಗಳು ನಡೆದಿರುವದು ದುರದೃಷ್ಟಕರ ಮತ್ತು ಆಘಾತಕಾರಿ. ಅಮೆರಿಕದಲ್ಲಿ ಭಾರತೀಯರ ಸುರಕ್ಷೆಗೆ ಸರಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಸಭೆಯಲ್ಲಿ ವೈ ವಿ ಸುಬ್ಟಾ ರೆಡ್ಡಿ (ವೈಎಸ್‌ಆರ್ ಕಾಂಗ್ರೆಸ್) ಒತ್ತಾಯಿಸಿದರು.