Advertisement
ಎಷ್ಟೋ ಜನರಿಗೆ ನೆಲ್ಲಿಕಾಯಿ ನೋಡಿದರೇ ಏನೋ ಒಂದು ರೀತಿಯ ಅಸಡ್ಡೆ. ಈ ವರದಿ ಓದಿದ ಮೇಲೆ ನೆಲ್ಲಿಕಾಯಿಯ ಕುರಿತ ನಿಮ್ಮ ನಿಲುವು ಬದಲಾಗಬಹುದು. ಇದು ಆರೋಗ್ಯ ಸಂಜೀವಿನಿ. ಹಲವು ಕಾಯಿಲೆಗಳಿಗೆ ರಾಮಬಾಣ.
Related Articles
Advertisement
ನೆಲ್ಲಿಕಾಯಿಯಲ್ಲಿ ಆ್ಯಂಟಿ ಅಕ್ಸಿಡೆಂಟ್ ಗುಣಗಳಿವೆ. ಇವು ಕ್ಯಾನ್ಸರ್ ಕಾರಕ ಕೋಶಗಳನ್ನು ಅವುಗಳ ಮೂಲದಿಂದಲೇ ಕೊಲ್ಲುತ್ತದೆ. ಹಾಗಾಗಿ ಇದು ಕ್ಯಾನ್ಸರ್ ಕಿಲ್ಲರ್
ಜೀರ್ಣ ಕ್ರಿಯೆ ಸರಾಗವಾಗುತ್ತದೆ :
ನೆಲ್ಲಿಕಾಯಿಯಲ್ಲಿರುವ ಸತ್ವಗಳು ನಮ್ಮ ಜೀರ್ಣಾಂಗ ವ್ಯೂಹವನ್ನು ಬಲಪಡಿಸುವುದರಲ್ಲಿ ಸಹಕಾರಿಯಾಗಿದೆ. ಅದರಲ್ಲಿ ಸಾಕಷ್ಟು ಫೈಬರ್ ಅಂಶ ಇರುವ ಕಾರಣ ನೆಲ್ಲಿಕಾಯಿ ತಿಂದರೆ ಹೊಟ್ಟೆಯಲ್ಲಿ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸೇರಿದ ಎಲ್ಲಾ ಕಾಯಿಲೆಗಳೂ ಮಾಯವಾಗುತ್ತದೆ.
ತ್ವಚೆಯನ್ನು ಹೊಳಪಿಗೆ ನೆಲ್ಲಿಕಾಯಿ ಬೆಸ್ಟ್ :
ನೆಲ್ಲಿಕಾಯಿ ಚರ್ಮದ ಆರೋಗ್ಯಕ್ಕೆ ಬಹಳಷ್ಟು ಸಹಕಾರಿ. ನೆಲ್ಲಿ ತಿಂದರೆ ಚರ್ಮದ ಹೊಳಪು ಚೆನ್ನಾಗಿ ಬರುತ್ತದೆ.
ಇಮ್ಯೂನಿಟಿ ಬೂಸ್ಟರ್ :
ನೆಲ್ಲಿಕಾಯಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ನೆಲ್ಲಿ ತಿಂದರೆ ಸಹಜವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗುತ್ತದೆ.
ಕಣ್ಣಿನ ದೃಷ್ಟಿ ಹೆಚ್ಚಿಸಕೊಳ್ಳಲು ನೆಲ್ಲಿಕಾಯಿ ಅತ್ಯುತ್ತಮ :
ನೆಲ್ಲಿಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆರಾಟಿನ್ ಕಂಡು ಬರುತ್ತದೆ. ಕೆರಾಟಿನ್ ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ಸಹಕಾರಿ. ಇವು ದೃಷ್ಟಿ ಹೆಚ್ಚಿಸಕೊಳ್ಳಲು ಇದು ಸಹಕಾರಿಯಾಗಿದೆ.
ನೆಲ್ಲಿಕಾಯಿ ಹೃದಯ ಮಿತ್ರ:
ನೆಲ್ಲಿಯಲ್ಲಿ ಫೈಬರ್, ಕಬ್ಬಿಣದಾಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಇದು ಅಕ್ಸಿಕರಣವನ್ನು ನಿಯಂತ್ರಿಸುತ್ತದೆ ಇದರಿಂದ ಧಮನಿಗಳು ಬಲಗೊಳ್ಳುತ್ತವೆ. ಜೊತೆಗೆ ನೆಲ್ಲಿ ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.