ಭೋಪಾಲ್ : ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ವೈದ್ಯರೊಬ್ಬರಿಂದ 9 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಭಿಲ್ವಾರಾ ನಿವಾಸಿ ಜೋಯಾ ಖಾನ್ ಅಲಿಯಾಸ್ ಮೋನಿಶಾ ಡೇವಿಡ್ (30) ಎಂಬಾಕೆಯನ್ನು ಗುರುವಾರ ಸಂಜೆ ಇಲ್ಲಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವದಯಾಳ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಇಲ್ಲಿನ ಆಸ್ಪತ್ರೆಯೊಂದನ್ನು ನಡೆಸುತ್ತಿರುವ ಡಾ.ಪವನ್ ಚಿಲೋರಿಯಾ ಎಂಬವರು ನೀಡಿದ ದೂರಿನ ಪ್ರಕಾರ, ದೇವಾಸ್‌ನ ನಿವಾಸಿಗಳಾದ ಡಾ.ಸಂತೋಷ್ ದಬಾಡೆ ಮತ್ತು ಡಾ.ಮಹೇಂದ್ರ ಗಲೋಡಿಯಾ ಅವರು ಮೋನಿಶಾಳೊಂದಿಗೆ ಸೇರಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಉಳಿದ ಆರೋಪಿಗಳಿಬ್ಬರಾದ ವೈದ್ಯರನ್ನು ಇನ್ನಷ್ಟೇ ಬಂಧಿಸಬೇಕಿದೆ.
ಮೋನಿಶಾ ಜೂನ್ ನಲ್ಲಿ ದೂರುದಾರ ವೈದ್ಯರಿಗೆ ಕರೆ ಮಾಡಿ ಸ್ನೇಹ ಬೆಳೆಸಿದ್ದಳು ಎನ್ನಲಾಗಿದೆ. ನಂತರ ಇಬ್ಬರು ಭೇಟಿಯಾದರು ಮತ್ತು ಆಕೆಯ ಬಳಿ ವಿಡಿಯೋ ಮತ್ತು ಕೆಲವು ಛಾಯಾಚಿತ್ರಗಳನ್ನು ಚಿತ್ರೀಕರಿಸಲಾಗಿದೆ ಎಂದು ಚಿಲೋರಿಯಾ ಪೊಲೀಸರಿಗೆ ತಿಳಿಸಿದ್ದಾರೆ.
ನಂತರ ಆಕೆ ಮತ್ತುಇಬ್ಬರು ಆರೋಪಿಗಳು ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು 9 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ನಿರಂತರ ಸುಲಿಗೆ ಬೆದರಿಕೆಗಳಿಂದ ಬೇಸತ್ತ ಅವರು ಅಂತಿಮವಾಗಿ ಆಗಸ್ಟ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿದರು. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿ ವೈದ್ಯರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್ಪಿ ಸಿಂಗ್ ತಿಳಿಸಿದ್ದಾರೆ.