Advertisement

ನನ್ನ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಪ್ರಚಾರ:‌ ರಮೇಶ್ ಜಿಗಜಿಣಗಿ

12:00 PM Jun 08, 2022 | Team Udayavani |

ವಿಜಯಪುರ : ಚಿಕ್ಕೋಡಿಯಲ್ಲಿ ವಾಯವ್ಯ ಶಿಕ್ಷಕರ ಮೇಲ್ಮನೆ ಕ್ಷೇತ್ರದ ಪ್ರಕಾಶ ಹುಕ್ಕೇರಿ ಬಗ್ಗೆ ನಾನು ಮಾಡಿದ ಟೀಕೆಯನ್ನು ಕಾಂಗ್ರೆಸ್ ತಿರುಚಿದ್ದು, ಬಿಜೆಪಿ ಅಭ್ಯರ್ಥಿ ಅರುಣ ಶಹಪುರ ಬಗ್ಗೆ ಟೀಕೆ ಮಾಡಿದಂತೆ ತಿರುಚಿ ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ರಾಜಕೀಯ ಸಣ್ಣತನಕ್ಕೆ ಮುಂದಾಗಿದೆ ಎಂದು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ.

Advertisement

ತಮ್ಮ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಅಗುತ್ತಲೇ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮಜಾಯಿಸಿ ನೀಡಿದ ರಮೇಶ ಜಿಗಜಿಣಗಿ, ವಾಯವ್ಯ ಶಿಕ್ಷಕರ ಮೇಲ್ಮನೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಅವರ ಪಕ್ಷದ ವಸ್ತುಸ್ಥಿತಿ ಬಗ್ಗೆ ಟೀಕಿಸಿದ್ದೆ. ಪ್ರಕಾಶ ಹುಕ್ಕೇರಿ ಸುದೀರ್ಘ ರಾಜಕೀಯ ಜೀವನದಲ್ಲಿ ಏನು ಮಾಡಿದ್ದಾರೆ, ಅವರೇ ಹೇಳಬೇಕು ಎಂದು ಟೀಕಿಸಿದ್ದೆ. ಆದರೆ ತಮ್ಮ ವಿರುದ್ಧ ನನ್ನ ಟೀಕೆಯನ್ನು ತಿರುಚಿದ್ದಾರೆ. ಬಿಜೆಪಿ ಪಕ್ಷದ ನಮ್ಮ ಅಭ್ಯರ್ಥಿ ಅರುಣ ಶಹಪುರ ಅವರ ಬಗ್ಗೆ ಟೀಕಿಸಿದ್ದೇನೆ ಎಂಬಂತೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚಿಕ್ಕೋಡಿಯಲ್ಲಿ ಕಾಂಗ್ರೆಸ್ :

ಬಾಬಾಸಾಹೇಬರಿಗೆ ಮಾಡಿದ ಅವಮಾನವನ್ನೂ ಹೇಳಿದ್ದೆ. ಮೇಲ್ಮನೆ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಮಾಡಿದ ಕೆಲಸಗಳು ಏನೂ ಇಲ್ಲ ಎಂದು ಅವರ ಕಾರ್ಯವೈಖರಿ ಬಗ್ಗೆಯ ಟೀಕಿಸಿದ್ದೆ. ಆದರೆ ನನ್ನ ಈ ಟೀಕೆಯನ್ನು ಅರುಣ ಶಹಪುರ ಬಗ್ಗೆ ಟೀಕಿಸಿದ್ದಾಗಿ  ತಿರುಚಲಾಗಿದೆ ಎಂದು ಸಮಜಾಯಿಷಿ ನೀಡಿ, ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳೆ ಸೇರಿದಂತೆ 12 ಮಂದಿ ಬಲೂಚಿ ಕೈದಿಗಳನ್ನು ಗಲ್ಲಿಗೇರಿಸಿದ ಇರಾನ್!

Advertisement

ಸಾಲದ್ದಕ್ಕೆ ಈಚೆಗೆ ಇದನ್ನೇ ಕಳೆದ ಎರಡು ದಿನಗಳಿಂದ ಪ್ರಚಾರದಲ್ಲೂ ಹೇಳುವ ಮೂಲಕ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಇದು‌ ಕಾಂಗ್ರೆಸ್ ನಾಯಕರ ಮನಸ್ಥಿತಿ ಎಂಥದ್ದು ಎಂಬುದಕ್ಕೆ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.

ಪ್ರಕಾಶ ಹುಕ್ಕೇರಿ ವಿದ್ಯಾವಂತನೇ ಅಲ್ಲ. ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಈ ವ್ಯಕ್ತಿ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಲು ಅರ್ಹನೇ ಅಲ್ಲ ಎಂದು ಟೀಕಿಸಿದರು.

ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮೇಲ್ಮನೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಪುರ ಹಾಗೂ ಹಣಮಂತ ನಿರಾಣಿ ಇಬ್ಬರೂಬನನ್ನ ಹುಡುಗರು. ಈ ಇಬ್ಬರೂ ಮೇಲ್ಮನೆ ಸದಸ್ಯರಾಗಿ ಮಾಡಿದ ಕೆಲಸಗಳು ಅವರ ಗೆಲುವನ್ನು ಸುಲಭವಾಗಿಸಿದೆ ಎಂದರು.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್‌ ಗೋಪಾಲ ಘಟಕಾಂಬಳೆ, ವಿಜಯ ಜೋಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next