ರಿಪ್ಪನ್‌ಪೇಟೆ: ಸುಸಜ್ಜಿತ ಅಸ್ಪತ್ರೆಯಿದ್ದರೂ ವೈದ್ಯಾ ಧಿಕಾರಿಗಳ ಮತ್ತು ಇನ್ನಿತರ ಮೂಲ ಸಮಸ್ಯೆಗಳಿದ್ದರೂ ಕೂಡ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ರಿಪ್ಪನ್‌ಪೇಟೆಯಲ್ಲಿ ಗಣನೀಯವಾಗಿ ಜಾಸ್ತಿಯಾಗಿದ್ದ ಪಾಸಿಟಿವ್ ಕೇಸ್‌ಗಳು ಪಟ್ಟಣದ ಜನರಲ್ಲಿ ಆತಂಕ ಉಂಟು ಮಾಡಿತ್ತು. ಇರುವಂತಹ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದರು.
ಈ ಸಮಸ್ಯೆಯನ್ನು ಪಟ್ಟಣದ ವಿನಾಯಕಶೆಟ್ಟಿ ಎಂಬಾತ ಫೇಸ್‌ಬುಕ್‌ನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಬಳಿ ಊರಿನ ಸಮಸ್ಯೆಯನ್ನು ಹೇಳಿಕೊಂಡಿದ್ದ. ಅವರ ಕಮೆಂಟ್ ಅನ್ನು ಗಮನಿಸಿದ ಸಂಸದರು ಕೂಡಲೇ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಕಮೆಂಟ್ ಮೂಲಕ ತಿಳಿಸಿದರು.
ಮಾರನೇ ದಿನವೇ ಅವರು ಮತ್ತೂಮ್ಮೆ ಪ್ರತಿಕ್ರಿಯಿಸಿ ನಿಮ್ಮ ಕೆಲಸ ಆಗಿದೆ. ಡಿಎಚ್‌ಒ ಅವರಿಗೆ ರಿಪ್ಪನ್‌ಪೇಟೆಗೆ ತಾತ್ಕಾಲಿಕವಾಗಿ ವೈದ್ಯಾಧಿಕಾರಿಗಳ ನೇಮಕ ಮಾಡಲು ಸೂಚಿಸಲಾಗಿದೆ.
ಅದರಂತೆ ವೈದ್ಯಾಧಿಕಾರಿಯ ನೇಮಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಆದೇಶದ ಪ್ರತಿಯನ್ನು ಕಮೆಂಟ್‌ನಲ್ಲಿ ಹಾಕಿದ್ದಾರೆ. ಈ ಸಮಸ್ಯೆಯನ್ನುಹೇಳಿಕೊಂಡ ವಿನಾಯಕ ಶೆಟ್ಟಿ ಎಂಬ ಯುವಕ ಅವರಿಗೆ ಪಟ್ಟಣದ ಜನರ ಪರವಾಗಿ ಧನ್ಯವಾದಗಳನ್ನು ಹೇಳಿದ್ದಾರೆ.ಆದೇಶದಂತೆ ಡಾ| ಆಂಜನೇಯ ಇ.ಎನ್. ಎಂಬುವವರುಆರು ತಿಂಗಳವರೆಗೆ ತಾತ್ಕಾಲಿಕ ಗುತ್ತಿಗೆ ವೈದ್ಯಾಧಿಕಾರಿಯಾಗಿ ನೇಮಕವಾಗಿದ್ದಾರೆ.ಹಾಗೆಯೇ ಸಾಗರ ತಾಲೂಕಿನ ತ್ಯಾಗರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಕೂಡ ತಾತ್ಕಾಲಿಕವಾಗಿ
ವೈದ್ಯರ ನೇಮಕವಾಗಿದೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯಾ ಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು.