ಮೈಸೂರು: ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ಬಾರಿ ನಿಮ್ಮನ್ನು ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ಮಧ್ಯೆ ತರಬೇಡಿ. ನಮ್ಮನ್ನ ಕೇಳಿ ನಾವು ಉತ್ತರಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದಲ್ಲಿ ಅಕ್ರಮ ಆಗಿದೆ ಎನ್ನುತ್ತೀರ. ಆದರೆ ದಾಖಲೆ ಪರಿಶೀಲನೆ ವಿಧಾನಸೌಧಕ್ಕೆ ಬನ್ನಿ ಅಂದರೆ ಬರುವುದಿಲ್ಲ. ಆದರೆ ಪಿಎಂ ಕೇರ್ ಲೆಕ್ಕವನ್ನು ಮಾತ್ರ ನೀವು ಕೇಳುತ್ತೀರಾ. ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ ಎಂದು ವ್ಯಂಗ್ಯವಾಡಿದರು.
ಬಿ ಎಲ್ ಸಂತೋಷ್ ಅವರ ಭಾಷಣವನ್ನು ನೀವು ಕೇಳಿದ್ದು ನನಗೆ ಖುಷಿಯಾಗಿದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ರೀತಿಯಲ್ಲಿ ನಮ್ಮ ರಾಜ್ಯದ ವಿರೋಧ ಪಕ್ಷಗಳಿಂದ ಅವರು ನಿರೀಕ್ಷೆ ಮಾಡಿದ್ದಾರೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದೆ, ಮೋದಿ ಫಿಎಂ ಕೇರ್ ಫಂಡ್ ವಿಚಾರವನ್ನು ಅದರ ಮಧ್ಯೆ ತರುತ್ತೀರಾ ಎಂದರು.
ಸಿದ್ದರಾಮಯ್ಯರನ್ನು ಟ್ವಿಟರ್‌ನಲ್ಲಿ ಬಾಸ್ ಎಂದು ಉಲ್ಲೇಖಿಸಿದ್ದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಬಾಸ್ ಎನ್ನುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಅವರು ಈ ರಾಜ್ಯವನ್ನ ಆಳಿದ ನಾಯಕರು. ಅವರು ವಿರೋಧ ಪಕ್ಷದ ನಾಯಕರಾದರೂ ಮೈಸೂರಿನ ಮಗ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದರು.
ನಾನು ಯಾವಗಾಲೂ ಹಿರಿಯರಿಗೆ ಗೌರವ ಕೊಡುವವನು. ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ. ಬಾಸ್ ಅಂತ ಗೌರವದಿಂದಲೇ ಕರೆದಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು.