Advertisement

ಜವೇನಹಳ್ಳಿ ಮಠಕ್ಕೆ ಸಂಸದ ಪ್ರಜ್ವಲ್‌ ರೇವಣ್ಣ ಭೇಟಿ

04:13 PM Oct 01, 2022 | Team Udayavani |

ಹಾಸನ: ಭಕ್ತಾದಿಗಳ ಕೋರಿಕೆ ಮೇರೆಗೆ ಶುಕ್ರವಾರ ಮಧ್ಯಾಹ್ನ ಜವೇನಹಳ್ಳಿ ಮಠಕ್ಕೆ ಲೋಕಸಭಾ ಸದಸ್ಯರಾದ ಪ್ರಜ್ವಲ್‌ ರೇವಣ್ಣ ಅವರು ಭೇಟಿ ನೀಡಿ ಮಠದ ಸ್ವಾಮೀಜಿ ಯವರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಅವರೊಂದಿಗೆ ಮೊದಲು ಚರ್ಚಿಸಿ ನಂತರ ತಮ್ಮ ಅನುದಾನದಲ್ಲಿ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.

Advertisement

ನಂತರ ಮಾಧ್ಯಮದೊಂದಿಗೆ ಮಾತನಾಡಿ, ಜವೇನಹಳ್ಳಿ ಮಠಕ್ಕೆ ನಾನಷ್ಟೇ ಅಲ್ಲ ದೇವೇಗೌಡರು ಮತ್ತು ರೇವಣ್ಣ ಸಾಹೇಬ್ರು ಕೂಡ ಇಲ್ಲಿನ ಭಕ್ತರಾಗಿದ್ದಾರೆರ. ನಾನು ಕೂಡ ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಈ ಮಠದಲ್ಲಿ ತನ್ನದೆಯಾದ ಶಕ್ತಿ ಮತ್ತು ಶ್ರೀಗಳ ಆಶೀರ್ವಾದ ಸದ ಕಾಲ ನಮ್ಮ ಮೇಲೆ ಇರಲಿ ಎನ್ನುವ ಭಾವನೆಯಿಂದ ಬಂದಿದ್ದೇನೆ. ಇಲ್ಲಿನ ಸ್ವಾಮೀಜಿಗಳು ಮಠದ ಬಗ್ಗೆ ತಿಳಿಸಲಿಲ್ಲ. ಆದರೇ ಭಕ್ತಾದಿಗಳು ಹೇಳಿದ ವೇಳೆ ನಾನೇ ಶ್ರೀಗಳಿಗೆ ಮನವಿ ಮಾಡಿಕೊಂಡು ಮಠಕ್ಕೆ ಬರುವುದಾಗಿ ತಿಳಿಸಿದ್ದೆ.

ಅಭಿವೃದ್ಧಿಗೆ ಬದ್ಧ: ಇಲ್ಲಿ ಏನೆ ಅಭಿವೃದ್ಧಿ ಇದ್ದಲ್ಲಿ ಮಾಡಿಸಿಕೊಡುವ ಕೆಲಸ ಮಾಡಲಾಗುವುದು. ಈ ಮಠದಿಂದ ಬಹಳಷ್ಟು ಜನರಿಗೆ ಒಳ್ಳೆಯದಾಗಿದೆ. ಮತ್ತು ಸಮಾಜಕ್ಕೆ ಒಳ್ಳೆಯದಾಗಿದ್ದು, ಉತ್ತಮ ಸೇವೆ ಮಾಡುತ್ತಿದ್ದಾರೆ. ಒಮ್ಮೆ ಮಠವನ್ನು ನೋಡುವ ಇಚ್ಛೆ ಹಾಗೂ ಹಬ್ಬ ಇದ್ದುದರಿಂದ ಇಂದು ಮಠಕ್ಕೆ ಭೇಟಿ ನೀಡಿದ್ದೇನೆ ಎಂದರು. ಮಠದ ಬಗ್ಗೆ ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದು, ಕಲ್ಯಾಣಿ ಸ್ವತ್ಛತೆ ಮಾಡುವ ಕೆಲಸ ಮಾಡಲಾಗುವುದು.

 ಕಲ್ಯಾಣಿ ಸ್ವಚ್ಛತೆಗೆ ಆದ್ಯತೆ: ಈ ಹಿಂದೆ ಬಂದಾಗಲೇ ಕಲ್ಯಾಣಿ ಹಾಳಾಗಿತ್ತು. ತ್ಯಾಜ್ಯವನ್ನು ತೆಗೆಸಿ ಈಗ ಬರಿ ನೀರಿದೆ. ಪೂರ್ಣ ನೀರನ್ನು ಹೊರ ಹಾಕಿದ ಸ್ವಚ್ಛ ಕಾರ್ಯ ಮಾಡಬೇಕಿದೆ. ಈ ಕಲ್ಯಾಣಿಯ ಹಾಳ ಎಷ್ಟಿದೆ ಎಂಬುದು ಇನ್ನು ಸರಿಯಾಗಿ ಯಾರಿಗೂ ಮಾಹಿತಿ ಇಲ್ಲ. ಎಂಜಿನಿಯರ್‌ ಅವರನ್ನು ಕರೆಸಿ ಅಂದಾಜು ಮಾಡಿ ನಂತರ ಎಂಪಿ ಅನುದಾನ ಎಷ್ಟು ಬರುತ್ತದೆ ಗೊತ್ತಿಲ್ಲ. ಸಂಪೂರ್ಣವಾಗಿ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಪೀಠ ಶಕ್ತಿ ಏನಿದೆ ಮತ್ತೂಮ್ಮೆ ನಮ್ಮ ಸಾರ್ವಜನಿಕರಿಗೆ ಆಶೀರ್ವಾದ ಸಿಕ್ಕಿ ಸಮಾಜದಲ್ಲಿ ಸೇವೆ ಮಾಡುವ ಕೆಲಸ ಈ ಮಠದಲ್ಲಿ ಆಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮಠದೊಂದಿಗೆ ಉತ್ತಮ ಸಂಬಂಧ: ಶ್ರೀ ಜವೇನಹಳ್ಳಿ ಮಠದ ಮಠಾದೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಅವರು ಮಾತನಾಡಿ, ಮಠಕ್ಕೆ ಸಂಸದರು ಆಗಮಿಸಿರುವುದು ಬಹಳ ಸಂತೋಷ ತಂದಿದೆ. ಪ್ರಾಚೀನ ಇತಿಹಾಸವಿರುವ ಶ್ರೀಮಠಕ್ಕೆ ಸಂಸದರು ಆಗಮಿಸಿ ಇಲ್ಲಿನ ಅಭಿವೃದ್ಧಿ ಬಗ್ಗೆ ಉತ್ಸುಕರಾಗಿ ಕಲ್ಯಾಣಿ ದುರಸ್ತಿ ಮಾಡಿಕೊಡಿಸಲಾಗುವುದು ಎಂದಿದ್ದಾರೆ. ಹಿರಿಯರ ಕಾಲದಿಂದಲೂ ಕೂಡ ಅವರ ನಡುವೆ ಉತ್ತಮ ಸಂಬಂಧವಿದ್ದು, ಮಠದಲ್ಲಿನ ಹಿರಿಯರ ಗದ್ದುಗೆ ಆಶೀರ್ವಾದ ಪಡೆದುಕೊಂಡು ಹೋಗಲು ಬಂದಿದ್ದು, ಅವರಿಗೆ ದೇವರು ಒಳಿತು ಮಾಡಲಿ ಎಂದರು.

Advertisement

ಇದೇ ವೇಳೆ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌.ದ್ಯಾವೇಗೌಡ, ಮುಖಂಡರಾದ ಗಿರೀಶ್‌ ಚನ್ನàರಪ್ಪ, ಮಹೇಶ್‌ ಇತರರು ಉಪಸ್ಥಿತರಿದ್ದರು.

ಮಠದ ನವೀಕರಣದ ಆಶ್ವಾಸನೆ : ಮಠದ ಕಲ್ಯಾಣಿಗೆ ಸುಮಾರು 800 ವರ್ಷಗಳ ಇತಿಹಾಸದೆ. ಮೊದಲು ಕಲ್ಲಿನ ಕಟ್ಟಡವಿತ್ತು. ಮೊದಲು ಉತ್ತಮವಾದ ನೀರು ಬರುತಿತ್ತು. ಕಳೆದ ಹತ್ತು ವರ್ಷಗಳಿಂದ ಇತ್ತೀಚೆಗೆ ಅದರ ಜಲಧಾರೆ ಕಡಿಮೆಯಾಗಿದ್ದು, ಪ್ರಸ್ತುತ ದುಸ್ತಿತಿಗೆ ಬಂದು ಬಿಟ್ಟಿದೆ. ಸಂಸದರು ಅದನು ಮತ್ತೆ ನವೀಕರಣ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಜವೇನಹಳ್ಳಿ ಕೆರೆ ಪಕ್ಕದಲ್ಲಿ ಹೇಮಾವತಿ ನಗರ ಸೇರಿದಂತೆ ಹಾಸನದ ಕಲುಶಿತ ನೀರೆಲ್ಲಾ ಮಠದ ಗದ್ದೆಗೆ ಬಂದು ಸೇರುತ್ತಿದೆ. ಈ ಬಗ್ಗೆ ಗಮನಹರಿಸಿ ಸರಿಪಡಿಸಬೇಕಾಗಿದೆ ಎಂದು ಜವೇನಹಳ್ಳಿ ಮಠಾದೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next