Advertisement

ಶಿರಾಡಿಘಾಟ್‌ ರಸ್ತೆ ಬಂದ್‌ ಮಾಡಲು ಬಿಡಲ್ಲ: ಸಂಸದ ಪ್ರಜ್ವಲ್‌ ರೇವಣ್ಣ

05:07 PM Mar 05, 2022 | Team Udayavani |

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ಸಕಲೇಶಪುರದಿಂದ ಮಾರನಹಳ್ಳಿವರೆಗೆ ಚತುಷ್ಪಥ ಕಾಂಕ್ರಿಟ್‌ ರಸ್ತೆ ನಿರ್ಮಾಣಕಾಮಗಾರಿ ನಡೆಸಲು ಶಿರಾಡಿ ರಸ್ತೆ ಬಂದ್‌ ಮಾಡುವ ಎನ್‌ಎಚ್‌ಎಐ ಪ್ರಸ್ತಾವನೆ ಯಾವ ಕಾರಣಕ್ಕೂಒಪ್ಪುವುದಿಲ್ಲ. ರಸ್ತೆ ಬಂದ್‌ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಸ್ಪಷ್ಟಪಡಿಸಿದರು.

Advertisement

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಯ ದಿಶಾ ಸಮಿತಿ ಸಭೆಯ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದರು. ಹಾಸನ -ಸಕಲೇಶಪುರ ನಡುವಿನ ಚತುಷ್ಪಥ ರಸ್ತೆ ನಿರ್ಮಾಣಕಾಮಗಾರಿ ಎನ್‌ಎಚ್‌ಎಐ ನಿಗದಿತ ಸಮಯಕ್ಕೆಸರಿಯಾಗಿ ಗುರಿ ಸಾಧನೆ ಮಾಡಿ ಲ್ಲ. ಹಾಗಾಗಿ ಶಿರಾಡಿ ಘಾಟ್‌ ರಸ್ತೆ ಬಂದ್‌ ಮಾಡಿ ಕಾಮಗಾರಿ ನಡೆಸಲುಒಪ್ಪುವುದಿಲ್ಲ. ರಸ್ತೆ ಕಾಮಗಾರಿ ಪ್ರಗತಿ ಬಗ್ಗೆ ಶನಿವಾರ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಹೇಳಿದರು.

ರೈಲ್ವೆ ಮಾರ್ಗ; ಭೂ ಸ್ವಾಧೀನ ಪೂರ್ಣ: ಹಾಸನ- ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾ ಣದ ಯೋಜನೆ ಹಂತ-1 ಮತ್ತು ಹಂತ-2 ಎಂದು ವಿಂಗಡಿ ಸಲಾಗಿದೆ. ಚಿಕ್ಕಮಗಳೂರು-ಬೇಲೂರುನಡುವಿನ ಹಂತ 1ರ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಹಂತ-2 ಬೇಲೂರು-ಹಾಸನ ನಡುವಿನಭೂ ಸ್ವಾಧೀನ ಪ್ರಕ್ರಿಯೆ ಶೇ.94ರಷ್ಟು ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಭೂ ಸ್ವಾಧೀನಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮಾಡಲಾಗುವುದು. ಆನಂತರ ರೈಲ್ವೆಇಲಾಖೆ ಕಾಮಗಾರಿ ಆರಂಭಕ್ಕೆ ಟೆಂಡರ್‌ ಪ್ರಕ್ರಿಯೆಆರಂಭಿಸಲಿದೆ ಎಂದರು.

ಮರು ಪ್ರಸ್ತಾವನೆ ಸಲ್ಲಿಕೆ: ಸಕಲೇಶಪುರ ತಾಲೂಕಿನಲ್ಲಿ ಖಾಸಗಿ ಹಿಡುವಳಿಯ 3500 ಎಕರೆಯನ್ನುಸ್ವಾಧೀನಪಡಿಸಿಕೊಂಡು ಸುಮಾರು 8 ಸಾವಿರ ಎಕರೆ ಪ್ರದೇಶದ ಆನೆ ಕಾರಿಡಾರ್‌ ನಿರ್ಮಾಣದ ಯೋಜನೆಎಲಿಫೆಂಟ್‌ ಟಾಸ್ಕ್ಫೋರ್ಸ್‌ ತಿರಸ್ಕರಿಸಿತ್ತು. ಈಗಿನಪರಿಹಾರ ದರ ಪ್ರಕಾರ ಒಂದು ಎಕರೆಗೆ 16 ಲಕ್ಷರೂ.ನಂತೆ 3500ಎಕರೆಗೆ ಪರಿಹಾರ ಪಾವತಿಸಿ ಆನೆಕಾರಿಡಾರ್‌ ನಿರ್ಮಾಣದ ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಲಾಗಿತ್ತು. ಆದರೆ, ಶಾಸಕಎಚ್‌.ಕೆ.ಕುಮಾರಸ್ವಾಮಿ ಆನೆ ಹಾವಳಿ ಹೆಚ್ಚಿದೆ ಎಂದು ಆಕ್ಷೇಪಿಸಿ ಮರು ಪ್ರಸ್ತಾವನೆ ಸಲ್ಲಿಸುವಂತೆ ಪಟ್ಟುಹಿಡಿದಿದ್ದರು. ಅದರಂತೆ ಅರಣ್ಯ ಇಲಾಖೆ ಹಾಗೂಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನನಡೆದಿದೆ ಎಂದು ಪ್ರಜ್ವಲ್‌ ರೇವಣ್ಣ ಅವರು ಹೇಳಿದರು.

ಪುಶ್‌ಫ‌ುಲ್‌ ರೈಲ್‌ ಓಡಲಿದೆ: ಕೊರೊನಾ ಕಾರಣ,ಪ್ರಯಾಣಿಕರ ಕೊರತೆ ಇದ್ದುದರಿಂದ ಯಶವಂತಪುರ-ಹಾಸನ ನಡುವೆ ಸಂಚರಿಸುತ್ತಿದ್ದ ಡೆಮು ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ಜನರಿಂದ ರೈಲು ಸಂಚಾರದಬೇಡಿಕೆ ಬಂದಿದೆ. ರೈಲ್ವೆ ಇಲಾಖೆ ಅಧಿಕಾರಿ ಗಳನ್ನುಸಂಪರ್ಕಿಸಿ 15 ದಿನಗಳಲ್ಲಿ ಯಶವಂತಪುರ- ಹಾಸನನಡುವಿನ ಡೆಮು ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾ ಗುವುದು ಎಂದು ಪ್ರಜ್ವಲ್‌ ರೇವಣ್ಣ ಹೇಳಿದರು.

Advertisement

ವಿದೇಶಾಂಗ ಸಚಿವರಿಗೆ ಅಭಿನಂದನೆ: ಉಕ್ರೇನ್‌ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವಲ್ಲಿವಿದೇಶಾಂಗ ಸಚಿವ ಜೈಶಂಕರ್‌ ಅವರು ಶ್ರಮಿಸುತ್ತಿದ್ದಾರೆ.ಹಾಸನ ಜಿಲ್ಲೆಯ ವಿದ್ಯಾರ್ಥಿಗಳೂ ಸೇರಿಕರ್ನಾಟಕದವರನ್ನು ಸುರಕ್ಷಿತವಾಗಿ ಕರೆತರುವಂತೆಮನವಿ ಮಾಡಿ ಪ್ರಧಾನಿ ಹಾಗೂ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದೆ. ಮನವಿ ಪುರಸ್ಕರಿಸಿ ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ಮಾಡುವಂತೆ ಕ್ರಮ ವಹಿಸಿದ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವರನ್ನು ಅಭಿನಂದಿಸುವೆ ಎಂದರು.

ಗೋಧಿ ಬದಲು ರಾಗಿ ವಿತರಿಸಬಹುದು: ರಾಗಿ ಖರೀದಿಯ ಅವ್ಯವಸ್ಥೆ ಬಗ್ಗೆ ರೇವಣ್ಣ ಅವರು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಕಳೆದ ವರ್ಷ 7.5 ಲಕ್ಷ ಕ್ವಿಂಟಲ್‌ ರಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು ಆದರೆ, ಈ ವರ್ಷ 4.4 ಲಕ್ಷ ಕ್ವಿಂಟಲ್‌ ಖರೀದಿಗೆ ಸರ್ಕಾರ ನಿರ್ದೇಶನ ನೀಡಿದೆ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಿ ನ್ಯಾಯಬೆಲೆ ಅಂಗಡಿಗಳ ಮೂಲಕ ಗೋಧಿ ಬದಲು ರಾಗಿ ವಿತರಣೆ ಮಾಡಬಹುದು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸ ಬಹುದು ಎಂದು ಡೀಸಿ ಸಭೆಯ ಗಮನ ಸೆಳೆದರು.

ಸಿಎಸ್‌ಆರ್‌ ನಿಧಿ ಸದ್ಬಳಕೆಯಾಗಲಿ: ಬ್ಯಾಂಕುಗಳು ಸಿಎಸ್‌ಆರ್‌ ನಿಧಿ ಬಳಸುತ್ತಿಲ್ಲ ಎಂದು ಸಂಸದರು,ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೀಡ್‌ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ತಂಬಾಕು ಮಂ ಡಳಿ ಕೆಲವು ಕಂಪನಿಯಿಂದ ಸಿಎಸ್‌ಆರ್‌ ನಿಧಿ ಕೊಡಿಸ ಬೇಕು ಎಂದು ಮಂಡಳಿಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಬ್ಯಾಂಕುಗಳ ಸಿಎಸ್‌ಆರ್‌ ನಿಧಿ ಯಾವ ಉದ್ದೇಶಕ್ಕೆ ಬಳಸಬೇಕು ಎಂದು ಜಿಪಂನಿಂದ ಬೇಡಿಕೆ ಬಂದರೆಬ್ಯಾಂಕ್‌ಗಳ ಗಮನ ಸೆಳೆದು ಸಿಎಸ್‌ಆರ್‌ ನಿಧಿ ಬಳಕೆಗೆಕ್ರಮ ಕೈಗೊಳ್ಳುವುದಾಗಿ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕರು ಸಭೆಗೆ ಭರವಸೆ ನೀಡಿದರು.

ಆಲೂರು ಇಒ ಭ್ರಷ್ಟಾಚಾರ: ಆಲೂರು ತಾಪಂ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಭ್ರಷ್ಟ ಅಧಿಕಾರಿ ಎಂಬ ದೂರಿದೆ. ಧೋರಣೆ ಬದಲಾಯಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಬೇಕಾದಿತು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಅವರು ಎಚ್ಚರಿಕೆ ನೀಡಿದರು.  ಪ್ರಜ್ವಲ್‌ ರೇವಣ್ಣ, ತಾಪಂ ಅಧ್ಯಕ್ಷರ ರಾಜೀನಾಮೆ ಕೊಡಿಸುವುದೂ ಸೇರಿದಂತೆ ಅನಗತ್ಯ ವಿಷಯದಲ್ಲಿ ಇಒ ತಲೆ ಹಾಕುತ್ತಿದ್ದಾರೆ. ಜೊತೆ ಭ್ರಷ್ಟಾಚಾರದ ದೂರು ಗಳೂ ಇವೆ. ಕಾನೂನು ಬಾಹೀರ ಕೆಲಸ ನಡೆಯುತ್ತಿದ್ದರೂ ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒಗೆ ಸಂಸದರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next