Advertisement
ಪಟ್ಟಣದಿಂದ ಕೆಜಿಎಫ್ವರೆಗೂ ಹದಗೆಟ್ಟಿರುವ ರಸ್ತೆಗೆ ಕಾಂಕ್ರೀಟ್ ತೇಪೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಈ ರಸ್ತೆ ಹಲವು ವರ್ಷಗಳಿಂದ ಗುಂಡಿಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಹಲವು ಮಂದಿ ಅಪಘಾತಕ್ಕೆ ತುತ್ತಾಗಿದ್ದಾರೆ. ಅದಕ್ಕೆ ಮೋಕ್ಷ ಕಲ್ಪಿಸಲು ಇಬ್ಬರು ಶಾಸಕರಿಂದ ಸಾಧ್ಯವಾಗದೆ ಇದ್ದರೂ, ಬಿಜೆಪಿಸರ್ಕಾರದ ಮೇಲೆ ಕೆಸರು ಎರೆಚುವ ಕೆಲಸ ಮಾತ್ರ ನಾಜೂಕಾಗಿ ಮಾಡುತ್ತಿದ್ದಾರೆ ಎಂದು ದೂರಿದರು.
Related Articles
Advertisement
ಐಜಿಪಿಯಿಂದಲೂ ಸ್ಪಷ್ಟಿಕರಣ: ಈಗಾಗಲೇಕೆಜಿಎಫ್ನಲ್ಲಿರುವ ಜಿಲ್ಲಾ ಎಸ್ಪಿ ಕಚೇರಿ ಬಗ್ಗೆಎದ್ದಿರುವ ಊಹಾಪೋಹಗಳ ಬಗ್ಗೆ ಸಿಎಂ ಮತ್ತುಗೃಹಮಂತ್ರಿ ಜೊತೆ ಚರ್ಚೆ ಮಾಡಲಾಗಿದೆ.ಯಾವುದೇ ಕಾರಣಕ್ಕೂ ಕೆಜಿಎಫ್ ಎಸ್ಪಿ ಕಚೇರಿಎತ್ತಂಗಡಿಯಾಗದು. ಐಜಿಪಿ ಅವರೂ ಟ್ವಿಟರ್‌ಮೂಲಕ ಸ್ಪಷ್ಟೀಕರಣ ನೀಡಿದ್ದಾರೆಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್, ಕೆಜಿಎಫ್ ನಗರ ಬಿಜೆಪಿ ಅಧ್ಯಕ್ಷ ಕಮಲ್‌ನಾಥ್,ಪುರಸಭೆ ಸದಸ್ಯ ಕಪಾಲಿ ಶಂಕರ್, ಪ್ರಭಾಕರ್‌ರಾವ್, ಯುವ ಮೋರ್ಚಾ ಅಧ್ಯಕ್ಷ ಬಿಂದುಮಾಧವ್, ಎಸ್‌ಸಿ ಮೋರ್ಚಾಧ್ಯಕ್ಷ ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಹೂವು ಆರ್.ಬಾಬು,ಬೆಂಗನೂರು ನಾರಾಯಣಗೌಡ, ದೊಡೂxರು ತ್ಯಾಗರಾಜ್, ಡಿ.ಕೆ.ಹಳ್ಳಿ ಗ್ರಾಪಂ ಸದಸ್ಯ ರಾಮಯ್ಯ, ದೋಣಿಮಡಗು ಮಂಜುನಾಥ್, ಆಲದಮರ ಬಾಬು, ಜೋಗಿ, ಎಸ್‌ಜಿ ಕೋಟೆ ಚಂದ್ರಶೇಖರ್ ಮತ್ತಿತರರು ಇದ್ದರು.