ಮುಳಬಾಗಿಲು: ಅಯೋಧ್ಯೆ ಶ್ರೀರಾಮಚಂದ್ರನ ಪ್ರತಿ ಷ್ಠಾಪನೆ ಕಾರ್ಯಕ್ರಮಕ್ಕೆ ಟ್ರಸ್ಟ್ ವತಿಯಿಂದ ಕಾಂಗ್ರೆಸ್ಸಿಗರಿಗೆ ಆಹ್ವಾನ ಬಂದರೂ, ಅಲ್ಲಿಗೆ ಹೋಗಲು ಮನಸ್ಸಿದ್ದರೂ, ಅವರ ಇಟಲಿ ಮೇಡಂ ಪರ್ಮಿಷನ್ ಕೊಡುತ್ತಿಲ್ಲವೆಂದು ಸಂಸದ ಮುನಿಸ್ವಾಮಿ ಲೇವಡಿ ಮಾಡಿದರು.
ನಗರದ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಜ,22ರಂದು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರತಿ ಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ದೇಶಾ ದ್ಯಂತ ಎಲ್ಲಾ ದೇಗುಲ ಸ್ವತ್ಛಗೊಳಿಸಬೇಕೆಂಬ ಪ್ರಧಾನಿ ನರೇದ್ರ ಮೋದಿ ಸೂಚನೆಯಂತೆ ದೇಗುಲ ಸ್ವಚ್ಛತಾ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಪ್ರತಿಷ್ಠಾಪನೆಗಾಗಿ ನೂರಾರು ವರ್ಷಗಳಿಂದ ಕಾಯುತ್ತಿದ್ದು, ಆ ಒಂದು ಅಮೃತ ಗಳಿಗೆ ಕೂಡಿ ಬರುತ್ತಿದೆ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಪ್ರತಿಷ್ಠಾಪನೆಯಾಗುವ ಮೂಲಕ ದೇವಾಲಯ ಲೋಕಾರ್ಪಣೆ ಯಾಗುತ್ತಿದ್ದು, ಎಲ್ಲಾ ಶ್ರೀ ರಾಮನ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ನರೇಂದ್ರ ಮೋದಿ ದೇಶದಲ್ಲಿರುವ ಪ್ರತಿಯೊಂದು ದೇವಾಲಯವನ್ನು ಸ್ವತ್ಛಗೊಳಿಸಿ ಸುಣ್ಣಬಣ್ಣ ಬಳಿ ಯುವ ಮೂಲಕ ಹಬ್ಬದ ಆಚರಣೆಯಂತೆ ಆಚರಿ ಸುವ ಮೂಲಕ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ ಎಂದ ಹೇಳಿದರು.
ಮಂದಿರ ಉದ್ಘಾಟನೆಯಲ್ಲಿ ಕಾಂಗ್ರೆಸ್ ರಾಜಕಾರಣ: ಇದೇ ಡಿಕೆ.ಶಿವಕುಮಾರ್ ಅವರು ಮುಖ್ಯ ಮಂತ್ರಿ ಆಗಬೇಕೆಂಬ ಉದ್ದೇಶದಿಂದ ನೂರಾರು ಸಾರಿ ದೇಗುಲಗಳಲ್ಲಿ ಹೋಮ-ಹವನ ಮಾಡಿಸಿ ಅದೇ ಮಂತ್ರಾಕ್ಷತೆಯನ್ನು ತಲೆ ಮೇಲೆ ಹಾಕಿಸಿಕೊಂಡು ಬಂದಿದ್ದರು. ಇಡೀ ಪ್ರಪಂಚವೇ ಭಗವಂತನ ಆಶೀರ್ವಾದ ಮತ್ತು ಕೃಪೆಗೆ ಕಾಯುತ್ತಿರುವಾಗ ಕಾಂಗ್ರೆಸ್ ಮುಖಂಡರು ಇದರಲ್ಲೂ ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಭಗವಂತನ ಕೃಪೆಗೆ ಪಾತ್ರರಾಗಿ: ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಭಾಗ ಗ ಳಲ್ಲಿ ಎಲ್ಲಾ ದೇಗುಲಗಳಲ್ಲಿ ಸ್ವತ್ಛತೆ ಮಾಡ ಬೇಕೆಂಬ ಉದ್ದೇಶದಿಂದ ಪ್ರಸ್ತುತ ಮುಳಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಖಂಡ ಅಶೋಕ್, ಎಂ.ಪ್ರಸಾದ್, ಮೈಕ್ ಶಂಕರ್ ಸೇರಿದಂತೆ ಎಲ್ಲಾ ಮುಖಂಡರು ಸೇರಿ ಈ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಾವು ಇದೇ ರೀತಿ ಪ್ರತಿಯೊಂದು ಹಳ್ಳಿಗೂ ಹೋಗಿ ಸ್ವತ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕು. ಇದರ ವಿರುದ್ಧವಾಗಿ ಯಾರೇ ಬಂದರೂ ಅಂಜುವುದು ಬೇಡ. ಯಾವುದೇ ಅನುಮತಿಗೆ ಕಾಯಬೇಡಿ. ಈ ಕಾಂಗ್ರೆಸ್ ಸರ್ಕಾರ ಹಿಂದೂ ಧರ್ಮ ಮತ್ತು ಶ್ರೀ ರಾಮನ ವಿರುದ್ಧ ಇದೆ. ದೇವರು ಎಲ್ಲರನ್ನೂ ಚೆನ್ನಾಗಿ ಇಟ್ಟಿರಲಿ. ನಾವು ಪ್ರತಿಯೊಂದು ದೇಗುಲವನ್ನು ಸ್ವತ್ಛಗೊಳಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು. ಈ ವೇಳೆ ಬಿಜೆಪಿ ಮುಖಂಡರು ಇದ್ದರು.
ಅಯೋಧ್ಯೆಯಿಂದ ಆಹ್ವಾನ ಬಂದ್ರೂ ಕಾಂಗ್ರೆಸ್ ತಿರಸ್ಕಾರ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಹಲವಾರು ಮುಖಂಡರು ಮೊದಲಿನಿಂದಲೂ ಅಯೋಧ್ಯೆ ಶ್ರೀರಾಮಚಂದ್ರನ ವಿಚಾರದಲ್ಲಿ ವಿರೋಧ ಮಾಡುತ್ತಾ ಬಂದವರು. ಇವರಿಗೆ ದೇಗುಲ ಟ್ರಸ್ಟ್ ಮೂಲಕ ಆಹ್ವಾನ ಕೊಟ್ಟರೂ, ನಾವು ಹೋಗುವುದಿಲ್ಲವೆಂದು ತಿರಸ್ಕಾರ ಮಾಡ್ತಿದ್ದಾರೆ. ಅದಕ್ಕೋಸ್ಕರ ದೇಶದ ಜನತೆ, ರಾಮನ ಭಕ್ತರು ತಿರಸ್ಕರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ಇರಬಹುದು. ಇವರಲ್ಲಿ ಡಿಕೆಶಿ ಅವರು, ನಾವು ಅನ್ನ ಭಾಗ್ಯ ಯೋಜನೆ ನೀಡುತ್ತಿರುವ ಅಕ್ಕಿಯಲ್ಲಿಯೇ ಮಂತ್ರಾಕ್ಷತೆ ನೀಡುತ್ತಿದ್ದಾರೆಂದು ಮಂತ್ರಾಕ್ಷತೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು. ಆದರೆ, ಡಿಕೆಶಿಗೆ ಮರೆವು ಅನಿಸುತ್ತಿದೆ. ಅವರು ಹೇಳಿರುವಂತಹ ಅನ್ನಭಾಗ್ಯದ ಅಕ್ಕಿಯನ್ನು ಇದುವರೆಗೂ ಕೊಟ್ಟಿಲ್ಲ. ಅವರು ಸುಳ್ಳು ಹೇಳುವುದು ಮಾಮೂಲಿ ಎಂದು ಸಂಸದ ಮುನಿಸ್ವಾಮಿ ಹೇಳಿದರು.