ಇಂದೋರ್: ʼದಿ ಕೇರಳ ಸ್ಟೋರಿʼ ದೇಶದೆಲ್ಲೆಡೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ವಿವಾದಿಂದಲೇ ಪ್ರಚಾರ ಹೆಚ್ಚಿಸಿಕೊಂಡ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ. ಕಮಾಯಿ ಮಾಡುವತ್ತ ಸಾಗಿದೆ.
ವಿವಾದಿಂದಾಗಿ ಬ್ಯಾನ್ ವರೆಗೂ ಹೋಗಿ ಕೋರ್ಟ್ ಮೆಟ್ಟಿಲು ಹತ್ತಿದ ಸಿನಿಮಾ, ದಿನಕಳೆದಂತೆ ಜನರ ಗಮನ ಸೆಳೆಯುತ್ತಿದೆ. ವ್ಯಕ್ತಿಯೊಬ್ಬ ʼದಿ ಕೇರಳ ಸ್ಟೋರಿʼ ಸಿನಿಮಾ ನೋಡಿದ ಬಳಿಕ ತನ್ನ ಪ್ರಿಯತಮೆಯನ್ನು ಆಕೆಯ ಧರ್ಮವನ್ನು ಬದಲಾಯಿಸು ಎಂದು ಆಕೆಯ ಮೇಲೆ ಒತ್ತಡ ಹೇರಿದ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಉತ್ತಮ ಶಿಕ್ಷಣ ಪಡೆದು ಖಾಸಗಿ ಕಂಪೆನಿಯಲ್ಲಿ ಒಂದೊಳ್ಳೆ ಕೆಲಸವನ್ನು ಮಾಡುತ್ತಿರುವ ಯುವತಿ 12ನೇ ಕ್ಲಾಸ್ ಓದಿರುವ ಯುವಕನನ್ನು ಕಳೆದ 4 ವರ್ಷಗಳ ಹಿಂದೆ ಕೋಚಿಂಗ್ ಸೆಂಟರ್ ವೊಂದರಲ್ಲಿ ಭೇಟಿಯಾಗಿದ್ದಳು. ಆ ಬಳಿಕ ಇಬ್ಬರು ಆತ್ಮೀಯರಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಧರ್ಮ ಬೇರೆಯಾಗಿದ್ದರೂ ಇಬ್ಬರು ಅನೋನ್ಯವಾಗಿದ್ದರು.
ಇತ್ತೀಚೆಗೆ ಇಬ್ಬರು ಜೊತೆಯಾಗಿ ʼದಿ ಕೇರಳ ಸ್ಟೋರಿʼ ಸಿನಿಮಾ ವೀಕ್ಷಿಸಲು ಹೋಗಿದ್ದರು. ಆ ಸಿನಿಮಾ ನೋಡಿದ ಬಳಿಕ ಪ್ರಿಯಕರ ಯುವತಿಗೆ ನೀನು ಧರ್ಮವನ್ನು ಬದಲಾಯಿಸಿಕೊಳ್ಳು ಎಂದು ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಇದಕ್ಕೆ ಒಪ್ಪದ ಯುವತಿಗೆ ಹಲ್ಲೆ ಮಾಡಿದ್ದ, ಆಕೆ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯವೆಸಗಿದ್ದ.
Related Articles
ಇದನ್ನೂ ಓದಿ: ಪಶ್ಚಿಮ ಬಂಗಾಳದ ಪರಿಸ್ಥಿತಿ ಉಕ್ರೇನ್‌ಗಿಂತ ಕೆಟ್ಟದಾಗಿದೆ: Suvendu Adhikari
ಸಿನಿಮಾ ನೋಡಿದ ಬಳಿಕ ಇಬ್ಬರ ನಡುವೆ ವಾಗ್ವಾದ ಉಂಟಾಗಿ ಯುವತಿ ಮೇಲೆ ಹಲ್ಲೆ ನಡೆಸಿ ಪ್ರಿಯಕರ ಹೋಗಿದ್ದ. ಯುವತಿ ನೇರವಾಗಿ ಬಂದು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ದಾಖಲು ಮಾಡಿ, ಬಲವಂತದ ಮತಾಂತರ, ದೌರ್ಜನ್ಯದ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.
ಪೊಲೀಸರು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2021, (ಇದು ಬಲವಂತವಾಗಿ ಅಥವಾ ಮೋಸದಿಂದ ಮತಾಂತರವನ್ನು ನಿಷೇಧಿಸುತ್ತದೆ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಯಡಿಯಲ್ಲಿ ಖಜ್ರಾನಾ ಪೊಲೀಸ್ ಠಾಣಾ ಪೊಲೀಸರು 23 ವರ್ಷದ ಯುವಕನನ್ನು ಬಂಧಿಸಿದ್ದಾರೆ.