Advertisement

ಅನ್ಯ ಜಾತಿ ವ್ಯಕ್ತಿ ಜತೆ ವಿವಾಹ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಕೊಲೆ

04:37 PM Nov 17, 2021 | Team Udayavani |

ಭೋಪಾಲ್:ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ ತಂದೆ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರಾಟಿಬಾದ್ ಎಂಬಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಲಖಿಂಪುರ್ ಖೇರಿ ಪ್ರಕರಣ: ತನಿಖೆಯ ಮೇಲ್ವಿಚಾರಣೆಗೆ ನಿವೃತ್ತ ಜಡ್ಜ್ ನೇಮಕ

ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಆರೋಪಿ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದ ಮಗಳ ಮಗನ ಅಂತ್ಯಕ್ರಿಯೆ ನಡೆಸಲು ಕಾಡಿಗೆ ಕರೆದೊಯ್ದಿದ್ದ. ಈ ಸಂದರ್ಭದಲ್ಲಿ ಬೇರೆ ಜಾತಿಯ ವ್ಯಕ್ತಿ ಜತೆ ವಿವಾಹವಾದ ಬಗ್ಗೆ ಮಗಳು ಮತ್ತು ತಂದೆ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ತಂದೆ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಭಾರತೀಯ ದಂಡ ಸಂಹಿತೆ 302 ಮತ್ತು 376ರ ಅನ್ವಯ ಪ್ರಕರಣ ದಾಖಲಿಸಲಾಗಿರುವುದಾಗಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಿಳೆಯ ಮತ್ತು ಮಗುವಿನ ಕೊಳೆತ ದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ತಂದೆ ಕೃತ್ಯ ಎಸಗಿರುವ ಕುರಿತು ತಪ್ಪೊಪ್ಪಿಕೊಂಡಿರುವುದಾಗಿ ರಾಟಿಬಾದ್ ಪೊಲೀಸ್ ಠಾಣಾಧಿಕಾರಿ ಸುದೇಶ್ ತಿವಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next