Advertisement

ಕಾರು ಢಿಕ್ಕಿಯಾಗಿ ವ್ಯಕ್ತಿ ಸಾವು: ಪರಾರಿಯಾದ ಚಾಲಕ ತಾಸೊಳಗೆ ಅರೆಸ್ಟ್‌

10:11 AM Mar 14, 2019 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿನ ಜಮ್ಮು – ಪಠಾಣ್‌ಕೋಟ್‌ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರೊಂದು ಮಧ್ಯ ಪ್ರದೇಶ ಮೂಲದ ವ್ಯಕ್ತಿಗೆ ಢಿಕ್ಕಿ ಹೊಡೆದು ಆತನ ಸಾವಿಗೆ ಕಾರಣವಾಗಿ ಪರಾರಿಯಾದ ಘಟನೆ ನಡೆದಿದೆ. 

Advertisement

ಹಿಟ್‌ ಆ್ಯಂಡ್‌ ರನ್‌ ನ ಆ ಕಾರನ್ನು ಪೊಲೀಸರು ಕೆಲವೇ ತಾಸುಗಳಲ್ಲಿ ಪತ್ತೆ ಹಚ್ಚಿ, ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮೃತ ವ್ಯಕ್ತಿಯನ್ನು 24ರ ಹರೆಯದ ರಾಮು ಎಂದು ಗುರುತಿಸಲಾಗಿದೆ. ಈತನು ಹೀರಾನಗರದಲ್ಲಿನ ಗುರಾ ಮುಂಡಿಯನ್‌ ಗ್ರಾಮದಲ್ಲಿ ತನ್ನ ಬಾಡಿಗೆ ಮನೆಗೆ ಸಮೀಪದಲ್ಲೇ ಹೈವೇಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಢಿಕ್ಕಿಯಾಗಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next