Advertisement

ಭತ್ತ ಬೆಳೆಗಾರರಿಗೆ ನೆರವು ಕೋರಿ ಹಣಕಾಸು ಸಚಿವರಿಗೆ ಸಂಸದ ಸಂಗಣ್ಣ ಪತ್ರ

06:05 PM Apr 23, 2020 | keerthan |

ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ರೈತರು ಅಧಿಕ ಭತ್ತ ಬೆಳೆದಿದ್ದು, ಲಾಕ್ ಡೌನ್ ಮತ್ತು ಕೋವಿಡ್-19 ಕಾರಣದಿಂದ ಬೆಲೆ ಕುಸಿತವಾಗಿದೆ. ಅವರ ನೆರವಿಗೆ ಸರಕಾರ ಧಾವಿಸಬಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ  ಕೊಪ್ಪಳ ಸಂಸದ ಸಂಗಣ್ಣ ಕರಡಿ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಲಕ್ಷಾಂತರ ರೈತರು ಹೆಕ್ಟೇರ್ ಭತ್ತ ಬೆಳೆದಿದ್ದಾರೆ. ಕೇಂದ್ರದ 1815 ಬೆಂಬಲ ಬೆಲೆ ಇದೆ. ಮಾರುಕಟ್ಟೆಯಲ್ಲಿ 1600 ರೂ.ಗೆ  ಖರೀದಿಸಲಾಗುತ್ತದೆ. ರೈತರು ಸಂಕಷ್ಟ ಕಾಲದಲ್ಲಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡುತ್ತಿದ್ದಾರೆ.

ಆದ್ದರಿಂದ ಲಾಕ್ ಡೌನ್ ಪರಿಸ್ಥಿತಿ ತಿಳಿಯಾದ ನಂತರ ಅಲ್ಲಿವರೆಗೆ ಉಗ್ರಾಣದಲ್ಲಿ ಇರಿಸಿ ಅದರ ಮೇಲೆ ರೈತರಿಗೆ ಅಡಮಾನ ಸಾಲ ಕೊಡಲು ಸೂಚಿಸಬೇಕು. ಮುಂದೆ ಬೆಲೆ ಹೆಚ್ಚಳವಾದಾಗ ರೈತರು ಭತ್ತ ಮಾರಾಟ ಮಾಡಲಿದ್ದಾರೆ. ಈಗ ರೈತರ ನೆರವಿಗೆ ಬರಬೇಕು ಎಂದು ಅವರು ಮನವಿಯಲ್ಲಿ ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next