Advertisement
ಕಾರ್ಯಕ್ರಮದ ಸಂಚಾಲಕ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಅವರು ಮಾತನಾಡಿ, ಗೋಪಾಲ್ ಶೆಟ್ಟಿ ಅವರು ರಾಜಕೀಯ ರಂಗದ ಎಲ್ಲ ಹಂತಗಳಲ್ಲೂ ತಮ್ಮ ಸಮಾಜ ಸೇವೆಯ ಕಲಾ ನೈಪುಣ್ಯದಿಂದ ಸಂಸದರಾಗಿ ದೇಶದಲ್ಲಿಯೇ ಓರ್ವ ಸರ್ವಶ್ರೇಷ್ಠ ಸಂಸದರಾಗಿ ಹೆಸರು ಪಡೆದಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅವರ ಅಭಿನಂದನ ಸಮಾರಂಭವು ಅಭೂತ ಪೂರ್ವಕವಾಗಿ ನಡೆದು ಎಲ್ಲರ ಹೃದಯದಲ್ಲಿ ನೆಲೆ ನಿಲ್ಲುವಂತೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದೆ ಎಂದು ನುಡಿದರು.
Related Articles
Advertisement
ಮೀರಾ-ಡಹಾಣೂ ಬಂಟ್ಸ್ ಇದರ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ ಇವರು ಮಾತನಾಡಿ, ನಮ್ಮ ಕರ್ತವ್ಯಕ್ಕೆ ಅನುಗುಣವಾಗಿ ನಾವೆಲ್ಲರೂ ಕಾರ್ಯವೆಸಗುವ ಮೂಲಕ ಸಮಾರಂಭವನ್ನು ಮಹಾನಗರ ಅಲ್ಲದೆ ಉತ್ತರ ಮುಂಬಯಿ, ಥಾಣೆ, ಪಾಲ^ರ್ ಪ್ರದೇಶದಲ್ಲಿ ಕೂಡ ಅವರ ಬ್ಯಾನರ್‌ಗಳು ರಾರಾಜಿಸಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಮೆರವಣಿಗೆ, ಜನಸ್ತೋಮ ನಿಯಂತ್ರಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ, ದೇಶ ಭಕ್ತಿಗಾಯನ ಹಾಗೂ ಶಿಸ್ತಿನ ಸಿಪಾಯಿಯಾಗಿರುವ ಗೋಪಾಲ್ ಶೆಟ್ಟಿ ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ನಾವು ಕಾರ್ಯಕ್ರಮ ಆಯೋಜನೆ, ಮುಖ್ಯವಾಗಿ ಭದ್ರತೆಯ ಬಗ್ಗೆ ಚರ್ಚಿಸಲಾಯಿತು.
ಮೀರಾ-ಭಾಯಂದರ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಕೃಷ್ಣಪ್ಪ ಪೂಜಾರಿ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪಯ್ನಾರು ರಮೇಶ್ ಶೆಟ್ಟಿ, ಮಹೇಶ್ ಶೆಟ್ಟಿ, ಚಾರ್ಕೋಪ್ ಕನ್ನಡಿಗ ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್. ಶೆಟ್ಟಿ, ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್, ಸುರೇಶ್ ಅಂಚನ್, ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷರಾದ ಶಂಕರ ಡಿ. ಪೂಜಾರಿ, ಬೊರಿವಲಿ ತುಳು ಸಂಘದ ಅಧ್ಯಕ್ಷ ವಾಸು ಕೆ. ಪುತ್ರನ್, ಮೊಗವೀರ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಗೋಪಾಲ್ ಪುತ್ರನ್, ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ಪ್ರೇಮನಾಥ ಪಿ. ಕೋಟ್ಯಾನ್, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಜಿ. ಟಿ. ಆಚಾರ್ಯ, ಪೇಟೆಮನೆ ಪ್ರಕಾಶ್ ಶೆಟ್ಟಿ, ನಿಟ್ಟೆ ದಾಮೋದರ ಆಚಾರ್ಯ, ಪೊಯಿಸರ್ ಜಿಮಾVನದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸುರೇಶ್ ಅಂಚನ್, ವಿನೋದಾ ಎ. ಶೆಟ್ಟಿ, ವಿನೋದಾ ಡಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ಅಭಿನಂದನಾ ಸಮಾರಂಭದ ಯಶಸ್ಸಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಕಲಾ ಜಗತ್ತು ಡಾ| ವಿಜಯ ಕುಮಾರ್ ಶೆಟ್ಟಿ ಮತ್ತು ರಘುನಾಥ ಎಸ್. ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ