ನವ ದೆಹಲಿ : ಮಧ್ಯಪ್ರದೇಶದ ಜಬಲ್ ಪುರ ವಿಮಾನ ನಿಲ್ದಾಣವನ್ನು ರಾಣಿ ದುರ್ಗಾವತಿ ವಿಮಾನ ನಿಲ್ದಾಣವನ್ನಾಗಿ ಮರುನಾಮಕರಣ ಮಾಡುವುದರ ಬಗ್ಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ ಚೌಹಾಣ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯೋತಿರಾದಿತ್ಯ ಸಿಂದಿಯ ಅವರಲ್ಲಿ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ : ವಿಜಯನಗರಕ್ಕೆ ಬಂದಿಳಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ದಂಪತಿ
ದೆಹಲಿ ಜಬಲ್ ಪುರ ಇಂಡಿಗೋ ವಿಮಾನ ಸಂಚಾರಕ್ಕೆ ವರ್ಚುಲ್ ಸಭೆಯ ಮೂಲಕ ಚಾಲನೆ ನೀಡಿ ಮಾತನಾಡಿದ ಚೌಹಾಣ್, ನಮ್ಮ ಹೆಮ್ಮೆಯ ರಾಣಿ ದುರ್ಗಾವತಿಯ ನಂತರ ಜಬಲ್ಪುರ್ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಿದರೆ, ಆಕೆಯನ್ನುಗೌರವಿಸಿದಂತಾಗುತ್ತದೆಂದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮಧ್ಯಪ್ರದೇಶಕ್ಕೆ ಹೆಚ್ಚಿನ ವಿಮಾನಯಾನದ ಬಗ್ಗೆ ಪ್ರಾಶಸ್ಯ ನೀಡುತ್ತಿರುವುದರ ಬಗ್ಗೆ ಹೆಮ್ಮೆಯೆನ್ನಿಸುತ್ತದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಂಧಿಯಾ, “ಕಳೆದ 35 ದಿನಗಳಲ್ಲಿ, ನಾವು ಮಧ್ಯಪ್ರದೇಶದಲ್ಲಿ 44 ಹೊಸ ವಿಮಾನಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಅದರಲ್ಲಿ 26 ವಿಮಾನಗಳನ್ನು ಜಬಲ್ ಪುರ್ ನಲ್ಲಿ ಆರಂಭಿಸಿದ್ದೇವೆ” ಎಂದು ಸಿಂಧಿಯಾ ಹೇಳಿದ್ದಾರೆ.
ಇದನ್ನೂ ಓದಿ : ದೆಹಲಿ ಅತ್ಯಾಚಾರ ಪ್ರಕರಣ : ಫೇಸ್ ಬುಕ್, ಇನ್ಸ್ಟಾಗ್ರಾಂ ನಿಂದ ರಾಹುಲ್ ಪೋಸ್ಟ್ ಡಿಲೀಟ್..!