Advertisement

ಮ.ಪ್ರ. 70-80 ಶಾಸಕರಿಗೆ ಟಿಕೆಟ್‌ ಇಲ್ಲ?

06:00 AM Oct 20, 2018 | |

ಭೋಪಾಲ್‌/ರಾಯ್‌ಪುರ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸದ್ಯ ಶಾಸಕರಾಗಿರುವ 70-80 ಮಂದಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬೇಡ. ಹೀಗೆಂದು ಆರ್‌ಎಸ್‌ಎಸ್‌ ಬಿಜೆಪಿಗೆ ಸೂಚಿಸಿದೆ. ಈ ಮಾಹಿತಿ ಯನ್ನು ಪಕ್ಷದ ನಾಯಕರೇ ಹೊರಗೆಡವಿದ್ದಾರೆ. ಹಲವು ಮಾಧ್ಯಮ ಗಳಲ್ಲಿ ಈಗಾಗಲೇ ವರದಿ ಯಾದಂತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಎಲ್ಲಾ  ಕ್ಷೇತ್ರಗಳ ಶಾಸಕರ ಸಾಧನೆಯ ಬಗ್ಗೆ ವರದಿಗಳನ್ನು ತರಿಸಿ ಕೊಂಡು ಪರಿಶೀಲನೆ ನಡೆಸಿದ್ದರು. 

Advertisement

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವಾಣ್‌ ಸದ್ಯ ಬುದ್ನಿ ಕ್ಷೇತ್ರದ ಶಾಸಕರಾಗಿದ್ದು, ಅವರನ್ನು ಕೂಡ ಬಿಜೆಪಿ ಪರ ಒಲವಿರುವ ಗೋವಿಂದಪುರ ಕ್ಷೇತ್ರದಿಂದ ಸ್ಪರ್ಧಿಸಲು ಆರ್‌ಎಸ್‌ಎಸ್‌ ಸೂಚಿಸಿದೆ. ಸದ್ಯ ಮಾಜಿ ಮುಖ್ಯ ಮಂತ್ರಿ ಬಾಬುಲಾಲ್‌ ಗೌರ್‌ ಈ ಕ್ಷೇತ್ರದ ಶಾಸಕರಾಗಿದ್ದಾರೆ. 1980ರಿಂದ ಸತತವಾಗಿ ಅವರು ಇಲ್ಲಿಂದ ಗೆದ್ದಿದ್ದಾರೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸದ್ಯ ಜನ ಆಶೀರ್ವಾದ ಯಾತ್ರೆ ಯಲ್ಲಿ ವಿವಿಧ ಕ್ಷೇತ್ರಗಳಿಗೆ ತೆರಳಿದ್ದ ವೇಳೆ ಬಿಜೆಪಿ ಶಾಸಕರ ಕಾರ್ಯವೈಖರಿ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿದ್ದವು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 

2013ರಲ್ಲಿಯೂ ಕೂಡ ಶೇ.25 ಮಂದಿ ಹೊಸ ಬರಿಗೆ ಟಿಕೆಟ್‌ ನೀಡಿತ್ತು. ಅದರಲ್ಲಿ ಶೇ.75ರಷ್ಟು ಮಂದಿ ಗೆದ್ದಿದ್ದರು. ಸದ್ಯ ಜನರ ಆಕ್ರೋಶ ಇರುವುದು ಮುಖ್ಯ ಮಂತ್ರಿ ವಿರುದ್ಧ ಅಲ್ಲ, ಪಕ್ಷದ ಕೆಲ ಶಾಸಕರ ವಿರುದ್ಧ ಎಂದು ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪರಿಪೂರ್ಣಾನಂದ ಬಿಜೆಪಿಗೆ: ಆಂಧ್ರ ಪ್ರದೇಶದ ಶ್ರೀ ಪೀಠ ಕ್ಷೇತ್ರದ ಪೀಠಾಧಿಪತಿ ಮತ್ತು ಹಿಂದೂ ವಾಹಿನಿ ಎಂಬ ಸಂಘಟನೆಯ ಸ್ಥಾಪಕ ಸ್ವಾಮಿ ಪರಿಪೂರ್ಣಾನಂದ ಹೊಸದಿಲ್ಲಿ ಯಲ್ಲಿ ಶುಕ್ರವಾರ ಬಿಜೆಪಿಗೆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಸೇರ್ಪಡೆ ಯಾಗಿ ದ್ದಾರೆ. ಅವರು ಬಿಜೆಪಿಗೆ ಸೇರ್ಪಡೆ ಯಾಗಲಿ ದ್ದಾರೆ ಎಂಬ ವದಂತಿ ಇತ್ತು. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆಯೇ ಈ ಬೆಳವಣಿಗೆ ನಡೆದದ್ದು ಗಮನಾರ್ಹ. ಅವರು ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿ ಎಂದು ಹೇಳಲಾಗಿದೆ.

ಇನ್ನೆರಡು ದಿನಗಳಲ್ಲಿ ಪಟ್ಟಿ: ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ 2 ದಿನಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಪಕ್ಷದ ನಾಯಕ ಕೃಷ್ಣಸಾಗರ ರಾವ್‌ ಶುಕ್ರವಾರ ಹೇಳಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ತೆಲಂಗಾಣ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ್‌ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಲಾಗಿದೆ.

Advertisement

ಇಂದು ರಾಹುಲ್‌ ಭೇಟಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಅದಿಲಾಬಾದ್‌ ಜಿಲ್ಲೆಯ ಭೈನ್ಸಾ ಪಟ್ಟಣದಲ್ಲಿ ಅವರು ಬೃಹತ್‌ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next