Advertisement

ಕಾರವಾರ ಬೆಂಗಳೂರು ರಾತ್ರಿ ರೈಲಿಗಾಗಿ ಆಂದೋಲನ

07:10 AM Sep 06, 2017 | Harsha Rao |

ಬೆಳ್ತಂಗಡಿ: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರ ಬಹುದಿನದ ಬೇಡಿಕೆಯನ್ವಯ ಹಗಲು ರೈಲು ಓಡುತ್ತಿದ್ದರೂ ನಿರೀಕ್ಷಿತ ಫಲ ಕಾಣುತ್ತಿಲ್ಲ. ರಾತ್ರಿ ಓಡಿಸುವ ರೈಲಾಗಿ ಪರಿವರ್ತಿಸಿ ಎಂಬ ಕೂಗಿಗೆ ಈಗ ಮತ್ತಷ್ಟು ಧ್ವನಿ ಸೇರಿದೆ. ಕಾರಣ; ಕೆಲ ದಿನಗಳ ಹಿಂದೆ ಪ್ರಾಕೃತಿಕ ವಿಕೋಪದಿಂದಾಗಿ ಹಗಲು ರೈಲು ರಾತ್ರಿ ಯಶಸ್ವಿ ಓಡಾಟ ನಡೆಸಿದ್ದು!.

Advertisement

ಶಿರಾಡಿ ಘಾಟಿ ಸಮೀಪ ರೈಲು ಹಳಿಯ ಮೇಲೆ ಗುಡ್ಡ ಕುಸಿದ ಪರಿಣಾಮ ಬುಧವಾರ ಹಾಗೂ ಗುರುವಾರ ಯಶವಂತಪುರ-ಕಾರವಾರ- ಯಶವಂತಪುರ (ವಾರಕ್ಕೆ 3 ದಿನ ಓಡಾಟ. ರೈಲು ಸಂಖ್ಯೆ 16515/516) ರೈಲು ರಾತ್ರಿ ಓಡಾಟ ನಡೆಸಿ ಯಶವಂತಪುರದಿಂದ ಕಾರವಾರವನ್ನು 13 ಗಂಟೆಗಳಲ್ಲಿ ಕ್ರಮಿಸಬಹುದು ಎಂದು ತೋರಿಸಿ
ಕೊಟ್ಟಿದೆ. ಮಂಗಳೂರು ತಲುಪಿದ ಮೇಲೆ ಸುಮಾರು 1 ಗಂಟೆ ಕಾಲ ಕೊಂಕಣ ರೈಲ್ವೇಯ ದಾರಿ ಸುಗಮ ಸಂದೇಶಕ್ಕಾಗಿ ಕಾದು ನಿಲ್ಲಬೇಕಾಯಿತು. ಅದಾಗ್ಯೂ ಬೇಗನೆ ತಲುಪಿದೆ. ಈ ಸಂಗತಿ ಬಹುಕಾಲದಿಂದ ರಾತ್ರಿ ರೈಲಿಗೆ ಬೇಡಿಕೆ ಇಟ್ಟವರ ಮುಖದಲ್ಲಿ ಮುಗುಳುನಗೆ ಮೂಡಿಸಿದೆ. ಏಕೆಂದರೆ ಪ್ರಸ್ತುತ ಈ ರೈಲು ಪ್ರಯಾಣಕ್ಕೆ 18 ತಾಸು ತಿನ್ನುತ್ತದೆ.

ಏಕೈಕ ರೈಲು
ಕರಾವಳಿ ಕರ್ನಾಟಕವನ್ನು ರಾಜ್ಯ ರಾಜಧಾನಿಯೊಂದಿಗೆ ಬೆಸೆಯುವ ಈ ಏಕೈಕ ಪ್ರಮುಖ ರೈಲು ಈಗ 760 ಕಿ.ಮೀ. ದೀರ್ಘ‌ವಾದ ಸುತ್ತು ಬಳಸಿ ಸಾಗಿ ಪ್ರಯಾಣಕ್ಕೆ 18 ಗಂಟೆ ಬೇಡು ತ್ತದೆ. ಸಹಜವಾಗಿ ಬೆಂಗಳೂರು-ಕಾರವಾರ ನಡು ವಿನ ಪ್ರಯಾಣಿಕರಿಗೆ ಇದರಿಂದ ಅನುಕೂಲ ವಾಗುತ್ತಿಲ್ಲ. ಹೀಗಾಗಿ ಜನ 10 ಗಂಟೆಯಲ್ಲಿ ಕ್ರಮಿಸುವ ಬಸ್‌ಗಳನ್ನೇ ಆಶ್ರಯಿಸುತ್ತಿದ್ದಾರೆ. ರೈಲ್ವೇಗೆ ಇದರಿಂದ ಆದಾಯ ನಷ್ಟ ಆಗುವುದರ ಜತೆಗೆ ರೈಲ್ವೇ ಸೇವೆಯ ಬಗ್ಗೆ ಜನರಲ್ಲಿ ಸದ್ಭಾವನೆ ಮೂಡುತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೆಂಗಳೂರಿಗೆ ಶೀಘ್ರ ತಲುಪುವ ರಾತ್ರಿ ರೈಲು ಗಳಿವೆ. ಆದರೆ ಕರಾವಳಿಯಿಂದ ಮಾತ್ರ ಇಲ್ಲ.

ಬಸ್‌ಗಳು
ರಾಜ್ಯ ರಾಜಧಾನಿಯಲ್ಲಿ ಲಕ್ಷಾಂತರ ಮಂದಿ ಕರಾವಳಿಗರು ಇದ್ದು ಪ್ರತಿನಿತ್ಯ 100ಕ್ಕೂ ಅಧಿಕ ಬಸ್‌ಗಳು ಕುಂದಾಪುರ, ಮಂಗಳೂರಿನಿಂದ ಬೆಂಗಳೂರನ್ನು ತಲುಪುತ್ತವೆ. ಸಾವಿರಾರು ಮಂದಿ ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಈ ಬಸ್‌ಗಳ್ಳೋ ತಮಗಿಷ್ಟ ಬಂದ ದರದಲ್ಲಿ ಪ್ರಯಾಣಿಕರನ್ನು ಮನಬಂದಂತೆ ಸುಲಿಯುತ್ತವೆ. ಹಬ್ಬದ ಸಂದರ್ಭ 5 ಪಟ್ಟು ಅಧಿಕ ದರ ವಸೂಲಿ ಮಾಡಿ ಅಕ್ಷರಶಃ ದರೋಡೆ ಮಾಡುತ್ತವೆ. ಜತೆಗೆ ಕೆಲವರ ಸರ್ವಾಧಿಕಾರದ ದಾಷ್ಟ Âì ಬೇರೆ.
ಈ ರೈಲನ್ನು ಮೈಸೂರಿನಿಂದ ಆರಂಭಿಸಿ ಬೆಂಗಳೂರು-ಯಶವಂತಪುರ- ಶ್ರವಣಬೆಳಗೊಳ- ಹಾಸನ ಮೂಲಕ ಕಾರವಾರಕ್ಕೆ ಓಡಿಸಿದರೆ ಎಲ್ಲ ಪ್ರದೇಶಗಳ ಅಗತ್ಯ ಈಡೇರುತ್ತದೆ. ಅದಕ್ಕೆ ಹೊಂದಿಕೆಯಾಗುವಂತೆ ಮೈಸೂರು-
ಧಾರವಾಡ ಎಕ್ಸ್‌ಪ್ರೆಸ್‌ ರೈಲಿನ ವೇಳೆಯನ್ನು ಬದಲಾಯಿಸುವ ಮೂಲಕ ಮೈಸೂರು-ಹಾಸನ ನಡುವಿನ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬಹುದು. ಇದರೊಂದಿಗೆ ಬೆಂಗಳೂರು- ಕಾರವಾರ ರೈಲಿನ ಮಂಗಳೂರು-ಕಣ್ಣೂರು ಬೋಗಿಗಳನ್ನು ಮಂಗಳೂರು ಜಂಕ್ಷನ್‌ನಲ್ಲಿ ಜೋಡಿಸುವಂತೆ ಮಾಡಿದರೆ ಅಲ್ಲಿಯೂ 45 ನಿಮಿಷ ಉಳಿತಾಯವಾಗಿ ಪ್ರಯಾಣದ ಅವಧಿಯಲ್ಲಿ 4 ಗಂಟೆ 45 ನಿಮಿಷ ಕಡಿಮೆಯಾಗುತ್ತದೆ ಎಂದು ರೈಲ್ವೇ ರಾಷ್ಟ್ರೀಯ ಗ್ರಾಹಕ ಸಮಾಲೋಚನ ಸಮಿತಿ ಸದಸ್ಯ ವೆಂಕಟೇಶ ಶೆಣೈ ಅವರು ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ವಲಯ ಮಹಾಪ್ರಬಂಧಕರಿಗೆ ಪತ್ರ ಬರೆದಿದ್ದಾರೆ.

ಸಚಿವರಿಗೆ ಪತ್ರ
ಕುಂದಾಪುರದ ಜೈ ಭಾರ್ಗವ ಬಳಗ ರಾತ್ರಿ ರೈಲಿಗಾಗಿ ರೈಲ್ವೇ ಸಚಿವ ಪೀಯೂಷ್‌ ಗೋಯೆಲ್‌ ಅವರಿಗೆ ಸೋಮವಾರ ಪತ್ರ ಕಳುಹಿಸಿದೆ. ಮೈಸೂರು ದಾರಿ ಬದಲು ಕುಣಿಗಲ್‌ ದಾರಿಯಲ್ಲಿ ಸಾಗಿದರೆ 4.30 ಗಂಟೆ ಉಳಿತಾಯವಾಗುತ್ತದೆ. ಇದರಿಂದ ಒಟ್ಟು ದೂರ 760 ಕಿ.ಮೀ. ಬದಲು 666 ಕಿ.ಮೀ. ಆಗಲಿದೆ. ಈ ಸಾಧ್ಯತೆಗಳ ಪರಿಶೀಲನೆ ಮಾಡಿದರೆ ರೈಲಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಜೈ ಭಾರ್ಗವ ಬಳಗ ಜಾಲತಾಣ ಹಾಗೂ ವಿವಿಧ ಮಾಧ್ಯಮದ ಮೂಲಕ ಆಂದೋಲನವನ್ನೇ ಮಾಡುತ್ತಿದೆ.

Advertisement

ಕನಿಷ್ಠ ದರ, ಕನಿಷ್ಠ ಸಮಯ
ಬೆಂಗಳೂರು-ಕಾರವಾರ ನಡುವಿನ ಕುಣಿಗಲ್‌ ಮಾರ್ಗದಲ್ಲಿ ರಾತ್ರಿ ರೈಲಿನ ಬೇಡಿಕೆ ಎಷ್ಟೊಂದು ಜನೋಪಯೋಗಿ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಬೆಳಗ್ಗೆ ಬದಲಿಗೆ ರಾತ್ರಿ 8.30ಕ್ಕೆ ಯಶವಂತಪುರ
ದಿಂದ ಹೊರಟು ಬೆಳಗ್ಗೆ 6.10ಕ್ಕೆ ಮಂಗಳೂರು ತಲುಪಿ, ಅಲ್ಲಿಂದ ಒಂದು ಘಂಟೆ ಕ್ರಾಸಿಂಗ್‌ಗಾಗಿ ಕಾದು 8.30ಕ್ಕೆ ಕುಂದಾಪುರ ತಲುಪಿದೆ. ಕ್ರಾಸಿಂಗ್‌ ಇಲ್ಲವೆಂದರೆ ಏಳೂ-ಏಳೂವರೆಗೆಲ್ಲ ಕುಂದಾಪುರ ತಲುಪುತ್ತಿತ್ತು. ಇನ್ನೊಂದಿಷ್ಟು ತಾರ್ಕಿಕ ಸಮಯದ ವೇಳಾ ಪಟ್ಟಿ ಸಿದ್ಧಪಡಿಸಿದರೆ ಕೇವಲ ಎಂಟು ಗಂಟೆಯೊಳಗೆ 200-300 ರೂ.ಗಳಲ್ಲಿ ಬೆಂಗಳೂರಿ
ನಿಂದ ಕುಂದಾಪುರ ತಲುಪಬಹುದು. 
– ಅಜಿತ್‌ ಶೆಟ್ಟಿ ಕಿರಾಡಿ, ಜೈ ಭಾರ್ಗವ ಬಳಗ

ಪೇಜಾವರ ಶ್ರೀಗಳ ಬೆಂಬಲ
ಜೆೈ ಭಾರ್ಗವ ಬಳಗ ಪೇಜಾವರ ಶ್ರೀಗಳನ್ನು ಆಂದೋಲನಕ್ಕೆ ಬೆಂಬಲ ಕೇಳಿದಾಗ ರಾತ್ರಿ ರೈಲು ಅಗತ್ಯವಿದ್ದು ಸಮಯದ ಉಳಿತಾಯವೂ ಆಗುತ್ತದೆ ಎಂದು ಬೇಡಿಕೆಗೆ ಬೆಂಬಲ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next