Advertisement

ಸಕ್ಕರೆ ಆರತಿ ಮಾಡುವವರು ಈಗ ಫುಲ್ ಬ್ಯುಸಿ: ಕಣ್ಮರೆಯಾಗುತ್ತಿದೆ ಸಂಪ್ರದಾಯ

06:42 PM Nov 09, 2022 | Team Udayavani |

ದೋಟಿಹಾಳ: ಗೌರಿ ಹಬ್ಬದ ನಿಮಿತ್ತ ಗ್ರಾಮದ ವೆಂಕಟೇಶ ಕುಂಬಳೇಕರ್ ಅವರು ಬಿಡುವಿಲ್ಲದೇ ಸಕ್ಕರೆ ಆರತಿಯನ್ನು ತಯಾರಿಸುತ್ತಿದ್ದಾರೆ. ಇವರು ಸುಮಾರು 20-25 ವರ್ಷಗಳಿಂದ ಈ ಗೌರಿ ಹುಣ್ಣಿಮೆಗೆ ಬೇಕಾಗುವ ಸಕ್ಕರೆ ಆರತಿಗಳನ್ನು ತಯಾರಿಕೆಯನ್ನು ಮಾಡಿಕೊಂಡು ಬಂದಿದ್ದಾರೆ.

Advertisement

ಇವರ ಅಂಗಡಿಯಲ್ಲಿ ಹಲವಾರು ತಲೆಮಾರಿನಿಂದ ಸಕ್ಕರೆ ಆರತಿಯನ್ನು ಮಾಡುತ್ತಾ ಬಂದಿದ್ದಾರೆ. ಆದ ಕಾರಣ ನಾವುಗಳು ಮುಂದುವರೆಸಿಕೊಂಡು ಹೊಗುತ್ತಿದ್ದೇವೆ. ಇದಕ್ಕೆ ಹೆಚ್ಚು ಶ್ರಮ, ಅಲ್ಪ ಲಾಭವಾಗುತ್ತದೆ. ಒಂದು ಕೆಜಿ ಸಕ್ಕರೆ ಆರತಿಯನ್ನು ಮಾಡಿಕೊಡಲು 70-80ರೂಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ಸಕ್ಕರೆ ಖರ್ಚು, ಸೌದೆ ಖರ್ಚು ಇತ್ಯಾದಿ ಖರ್ಚುಗಳನ್ನು ತೆಗೆದರೆ ನಮಗೆ ಸಿಗುವುದು ಕೆ.ಜಿಗೆ 20-30 ರೂ ಮಾತ್ರ. ನಾವು 6-7 ದಿನಗಳಿಂದ ಸಕ್ಕರೆ ಆರತಿಯನ್ನು ತಯಾರಿಸಲು ನಾಲ್ಕು ಜನ ಸೇರಿ ಆರತಿಯನ್ನು ಮಾಡುತ್ತೇವೆ. ಕೆಲವೊಮ್ಮೆ ವ್ಯಾಪಾರ ಜೋರಾದರೆ, ಮೊತ್ತೊಮ್ಮೆ ಅತೀ ಮಂದಗತಿಯಲ್ಲಿ ಸಾಗುತ್ತದೆ, ಈ ಬಾರಿ ಉತ್ತಮ ಮಳೆ ಬೆಳೆ ಆದುದರಿಂದ ರೈತರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿರುವುದರಿಂದ ನಮ್ಮ ವ್ಯಾಪಾರ ಜೋರಾಗಿ ನಡೆಯುತ್ತಿದೆ ಎಂದು ವೆಂಕಟೇಶ ಕುಂಬಳೇಕರ್ ಅವರು ತಿಳಿಸಿದರು.

ಮಾಡುವ ವಿಧಾನ: ಸಕ್ಕರೆಯನ್ನು ಸಮನಾಂತರವಾಗಿ ನೀರನ್ನು ಹಾಕಿ ಪಾಕದಂತೆ ಮಾಡಿ ಅದನ್ನು ಕಟ್ಟಿಗೆಯ ಹಚ್ಚುಗಳಲ್ಲಿ ಹಾಕಿ ಕೆಲ ಕಾಲ ಆರಲು ಬಿಡುತ್ತಾರೆ. ಪಾಕವು ಗಟ್ಟಿಯಾಗ ಮೇಲೆ ಕಟ್ಟಿಗೆ ಹಚ್ಚುಗಳನ್ನು ಬೇರ್ಪಡಿಸಿ ವಿವಿದ ತರಹದ ಆರತಿಯನ್ನು ತಯಾರಿಸಿ ವ್ಯಾಪರಸ್ಥರಿಗೆ ನೀಡುತ್ತಾರೆ.

ಪದ್ದತಿ: ದೀಪಾವಳಿ ಪಾಡ್ಯ ಆದ ನಂತರ ಎರಡು ಮೂರು ದಿನಗಳಲ್ಲಿ ಗೌರಮ್ಮನನ್ನು ಗ್ರಾಮದ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಕೂರಿಸಿ ಆರತಿಯನ್ನು ಮಾಡುವುದು ಪದ್ದತಿ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಗೌರಿಹುಣ್ಣಿಮೆ ಕಾರಣ ಗೌರಿಗಾಗಿ ಸಕ್ಕರೆ ಆರತಿಯನ್ನು ಮಾಡಿಸಿಕೊಂಡು ಗೌರಮ್ಮನಿಗೆ ಆರತಿ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗೌರಿ ಹುಣ್ಣಿಗೆ ನಾಲ್ಕೈದು ದಿನಗಳಿಂದ ಗ್ರಾಮಗಳಲ್ಲಿ ಸಕ್ಕರೆ ಆರತಿಗಳನ್ನು ಇಟ್ಟುಕೊಂಡು ಗೌರಮ್ಮನಿಗೆ ಆರತಿ ಮಾಡಲು ಹೋಗುವುದು ಕಂಡುಬರುತ್ತಿವೆ.

ಹೊಸದಾಗಿ ಮದುವೆಯಾಗಲು ನಿಶ್ಚಯಮಾಡಿಕೊಂಡ ಮದುಮಗಳಿಗೆ ಗಂಡಿನ ಕಡೆಯವರು 5-10ಕೆಜಿ ಸಕ್ಕರೆ ಆರತಿಯನ್ನು ಮಾಡಿಸಿಕೊಂಡು ಹೊಸ ಸೀರೆಗಳನ್ನು ಕೊಟ್ಟು ಉಪಚರಿಸುವುದು ಒಂದು ಸಂಪ್ರದಾಯವಾಗಿದೆ. ಹೀಗಾಗಿ ಗೌರಿ ಹಬ್ಬದ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುತ್ತದೆ.

Advertisement

ಒಟ್ಟಾರೆ ಈ ಸಕ್ಕರೆ ಆರತಿ ತಯಾರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿದೆ.

ಸಕ್ಕರೆ ಆರತಿ ಮಾಡಲು ಮುಖ್ಯ ಕಟ್ಟಿಗೆಯ ಚಿತ್ರಗಳ ಹಲಿಗೆ. ಅವುಗಳು ಇದರೇ ಮಾತ್ರ ಆರತಿ ತಯಾರಿಸಲು ಬರುತ್ತದೆ. ಇಲ್ಲದಿದ್ದರೆ ಸಕ್ಕರೆ ಆರತಿ ಮಾಡಲು ಬರುವುದಿಲ್ಲ. ಇಂತಹ ಕಟ್ಟಿಗೆಯ ಮೇಲೆ ಚಿತ್ರ ಕೆತ್ತನೆ ಮಾಡುವವರು ಕಡಿಮೆಯಾಗಿದ್ದಾರೆ. ಸದ್ಯ ಮನೆಯಲ್ಲಿ ಇದ ಹಳೆ ಕಟ್ಟಿಗೆಯ ಚಿತ್ರದ ಹಲಿಗೆಗಳನ್ನು ಉಪಯೋಗಿಸಿಕೊಂಡು ಸಕ್ಕರೆ ಆರತಿಗಳನ್ನು ತಯಾರಿಸುತ್ತಿದ್ದೇವೆ. ಲಕ್ಷ್ಮೀ ವೆಂಕಟೇಶ ಕುಂಬಳೇಕರ್,ಸಕ್ಕರೆ ಆರತಿ ತಯಾರಕರು ದೋಟಿಹಾಳ.

 

ವರದಿ: ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next